ಭೂ ಸ್ವಾಧೀನ ಪ್ರಕ್ರಿಯೆ ರದ್ದತಿಗೆ ಆಗ್ರಹ

7

ಭೂ ಸ್ವಾಧೀನ ಪ್ರಕ್ರಿಯೆ ರದ್ದತಿಗೆ ಆಗ್ರಹ

Published:
Updated:

ಯಾದಗಿರಿ: ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮ­ದಲ್ಲಿ  ಯುರೇನಿಯಂ ಗಣಿಗಾರಿಕೆಗಾಗಿ ಭೂಸ್ವಾಧೀನ ಪ್ರಕ್ರಿಯೆ­ಯನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಯುರೇನಿಯಂ ಗಣಿಗಾರಿಕೆಯಿಂದ ಪರಿಸರ ಹಾಗೂ ಜನರ ಮೇಲೆ ದುಷ್ಪರಿಣಾಮ ಆಗುತ್ತದೆ.ಸೈದಾಪುರ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ತಡೆಯಬೇಕು ಎಂದು ಆಗ್ರಹಿಸಿದರು.

ಸೈದಾಪುರ ಗ್ರಾಮದಲ್ಲಿ ಈಗಾಗಲೇ ಏಕ­ಪಕ್ಷೀ­ಯವಾಗಿ ಜಮೀನುಗಳ ಭೂಸ್ವಾಧೀನ ಮಾಡಿದ್ದು, ಕಾನೂನು ಬಾಹಿರವಾಗಿದೆ. ಕೂಡಲೇ ಭೂ­ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸ­ಬೇಕು. ಜೀವ ಸಂಕುಲಕ್ಕೆ ಮಾರಕವಾಗಿರುವ ಯುರೇನಿಯಂ ಗಣಿಗಾರಿಕೆಗೆ ಭೂಮಿ ನೀಡುವುದಿಲ್ಲ ಎಂದು ರೈತರು ಎಚ್ಚರಿಸಿದರು.ಯುರೇನಿಯಂ ಗಣಿಗಾರಿಕೆಗಾಗಿ ಭೂಮಿ ಕೊಡು­ವುದಿಲ್ಲ, ಜೊತೆಗೆ ತಾವು ನಿಗದಿ ಪಡಿಸಿದ ಪರಿಹಾರ ಸ್ವೀಕರಿಸುವುದಿಲ್ಲ, ಕೂಡಲೇ ಭೂ­ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ  ಕಚೇರಿ ಶಿರಸ್ತೇದಾರ್‌ ಅವರಿಗೆ ಮನವಿ ಸಲ್ಲಿಸಿದರು.ಸಿದ್ದಪ್ಪ, ಶಿವರಾಜ, ಸಂಗಣ್ಣ ಸಾಹು, ಗುರುಬಸಪ್ಪ, ಬಸವರಾಜ, ಮಲ್ಲಣ್ಣ, ದೇವಿಂದ್ರಪ್ಪ, ಶಾಂತಪ್ಪ, ಅಮ್ಮವ್ವ, ಮಳಗೆಪ್ಪ, ಮಲ್ಲಪ್ಪ, ಚಂದ್ರಶೇಖರ, ಭಾಗಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry