ಶುಕ್ರವಾರ, ಆಗಸ್ಟ್ 12, 2022
25 °C

ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ.

ಸೋಮವಾರ ಸೇರಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಮಾನ್ಯ ಸಭೆ­ಯಲ್ಲಿ ಭೈರಪ್ಪ ಅವರನ್ನು ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಯಿತು. ಭೈರಪ್ಪನವರ ಜತೆ ತೆಲುಗು ಸಾಹಿತಿ ಸಿ. ನಾರಾಯಣ ರೆಡ್ಡಿ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ.ಸಾಹಿತ್ಯ ಅಕಾಡೆಮಿಯ ಫೆಲೋ, ಸಾಹಿತಿಗಳಿಗೆ ಸಲ್ಲುವ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೂ ಮೊದಲು ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಈ ಗೌರವ ಸಂದಿತ್ತು. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂ ಗಾರ್‌, ದ.ರಾ. ಬೇಂದ್ರೆ ಮತ್ತು ಕೆ.ಎಸ್‌. ನರಸಿಂಹಸ್ವಾಮಿ ಅವರೂ ಸೇರಿದಂತೆ ಕನ್ನಡದ ಅನೇಕ ಲೇಖಕರಿಗೆ ಗೌರವ ಸಿಕ್ಕಿತ್ತು.ಅಕಾಡೆಮಿ 21ಫೆಲೋಗಳಲ್ಲಿ ಭೈರಪ್ಪ­ನವರೂ ಒಬ್ಬರು. ಕರ್ನಾ ಟಕದಲ್ಲಿ ಮನೆ ಮಾತಾಗಿರುವ ಭೈರಪ್ಪ­ನವರು ದೊಡ್ಡ ಓದುಗ ಅಭಿಮಾನಿ­ಗಳನ್ನು ಹೊಂದಿದ್ದಾರೆ. ಮರಾಠಿ ಹಾಗೂ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಭಾಷಾಂತರಗೊಂಡಿದೆ. ಅವರ ಕೃತಿಗಳು ಇಂಗ್ಲಿಷ್‌ಗೂ ಅನುವಾದಗೊಂಡಿವೆ.2010ರಲ್ಲಿ ಸರಸ್ವತಿ ಸಮ್ಮಾನ್‌ ಪುರ­ಸ್ಕಾರಕ್ಕೂ ಪಾತ್ರರಾಗಿರುವ ಭೈರಪ್ಪನವರ ಒಲವು– ನಿಲುವುಗಳನ್ನು ಇಷ್ಟ ಪಡುವ­ವರಂತೆ ವಿರೋಧಿಸುವವರೂ ಇದ್ದಾರೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಭೈರಪ್ಪನವರ ಕೃತಿಗಳು ಉಳಿದವರಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.‘ಆವರಣ’ ಸೇರಿದಂತೆ ಭೈರಪ್ಪನವರ ಅನೇಕ ಕೃತಿಗಳು ಎಂಟು, ಹತ್ತು ಮುದ್ರಣಗಳನ್ನು ಕಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.