ಭ್ರಷ್ಟಹಣ ರಾಷ್ಟ್ರೀಯ ಸಂಪತ್ತು ಆಗಲಿ

ಶುಕ್ರವಾರ, ಜೂಲೈ 19, 2019
26 °C

ಭ್ರಷ್ಟಹಣ ರಾಷ್ಟ್ರೀಯ ಸಂಪತ್ತು ಆಗಲಿ

Published:
Updated:

ಶಿವಮೊಗ್ಗ: ಪ್ರಪಂಚದ ಬೇರೆ ಬೇರೆ ಬ್ಯಾಂಕುಗಳಲ್ಲಿರುವ ಭ್ರಷ್ಟ್ರಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್ ಆಗ್ರಹಿಸಿದರು.ರಾಮ್‌ದೇವ್ ಬಂಧನ ಖಂಡಿಸಿ ಬಿಜೆಪಿ ನಗರದ ಗೋಪಿವೃತ್ತದಲ್ಲಿ ಭಾನುವಾರ ರಾತ್ರಿ ಆರಂಭಿಸಿದ 24 ಗಂಟೆ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿದೇಶದಲ್ಲಿರುವ ಕಪ್ಪುಹಣದಲ್ಲಿ ಕಾಂಗ್ರೆಸ್ಸಿನ ಪಾಲು ಹೆಚ್ಚಿದೆ. ಹಾಗಾಗಿ, ಅದು, ಬಾಬಾ ರಾಮ್‌ದೇವ್ ಸತ್ಯಾಗ್ರಹವನ್ನು ದಮನ ಮಾಡಲು ಹೊರಟಿದೆ. ಕಪ್ಪುಹಣ ಹಿಂದಕ್ಕೆ ತರಲು ಈಗ ಕಾಲ ಸನ್ನಿಹಿತವಾಗಿದೆ ಎಂದರು.ಬಾಬಾ ರಾಮ್‌ದೇವ್ ಸತ್ಯಾಗ್ರಹವನ್ನು ಹತ್ತಿಕ್ಕಿದ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಟೀಕಿಸಿದರು.ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಂದ್ರ ಸರ್ಕಾರ ಗೂಂಡಾವರ್ತನೆ ತೋರಿದೆ. ರಾಮ್‌ದೇವ್ ಅವರ ಭಕ್ತರನ್ನು ಮನಬಂದಂತೆ ಥಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಧರಣಿಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಯ್ಯ, ಶಾಸಕ ಕೆ.ಜಿ. ಕುಮಾರಸ್ವಾಮಿ, ಎಂಎಡಿಬಿ ಅಧ್ಯಕ್ಷ ಪದ್ಮನಾಭಭಟ್, ಮುಖಂಡರಾದ ಚನ್ನಬಸಪ್ಪ, ಎಚ್.ಸಿ. ಬಸವರಾಜಪ್ಪ, ಎನ್.ಜೆ. ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಮಳೆಯಲ್ಲೇ ಕಾರ್ಯಕರ್ತರಿಂದ ಭಜನೆ ಕಾರ್ಯಕ್ರಮ ನಡೆಯಿತು. ಬಿಜೆಪಿ ಈ ಧರಣಿ ಸೋಮವಾರ ಸಂಜೆ 7ರವರೆಗೆ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ.ಬಸ್ ಡಿಕ್ಕಿ: ಪಾದಚಾರಿ ಸಾವು

ಖಾಸಗಿ ಬಸ್‌ವೊಂದು ಪಾದಚಾರಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಮಿಳ್ಳಘಟ್ಟ ರಸ್ತೆಯಲ್ಲಿ ನಡೆದಿದೆ.ಮೃತಪಟ್ಟವರನ್ನು ಬುದ್ಧನಗರದ ಕಂದನ್ (40) ಎನ್ನಲಾಗಿದೆ. ಕಂದನ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡಿದಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್‌ಗೆ ಕಲ್ಲು ತೂರಿ ಗ್ಲಾಸ್‌ಗಳನ್ನು ಒಡೆದು ಹಾಕಿದ ಘಟನೆ ನಡೆಯಿತು.   ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry