ಶುಕ್ರವಾರ, ಅಕ್ಟೋಬರ್ 18, 2019
27 °C

ಭ್ರಷ್ಟಾಚಾರಕ್ಕೂ ಬಡ್ತಿ

Published:
Updated:

ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಮೂವರು ಐ.ಎ.ಎಸ್. ಅಧಿಕಾರಿಗಳಾದ ಸಿದ್ದಯ್ಯ, ಸಾದಿಕ್ ಹಾಗೂ ವೀರಭದ್ರಯ್ಯ ಅವರು ರಾಜ್ಯ ಆಡಳಿತ ಸೇವೆ (ಕೆ.ಎ.ಎಸ್.)ಯಿಂದ ಬಡ್ತಿ ಪಡೆದು ಅಖಿಲಭಾರತ ಆಡಳಿತ ಸೇವೆಗೆ (ಐ.ಎ.ಎಸ್.) ಸೇರಿದ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ಬಳಿ ಇಷ್ಟು ದೊಡ್ಡ ಮೊತ್ತದ ಸಂಪತ್ತು ಪತ್ತೆಯಾಗಿದೆ ಎಂಬ ವಿವರಗಳನ್ನು ಓದಿ ಆಶ್ಚರ್ಯವಾಯಿತು.ಸೇವೆಯ ಹೆಸರಿನಲ್ಲಿ ಅವರ ಆದಾಯಕ್ಕೂ ಮೀರಿದ ಅಕ್ರಮ ಸಂಪತ್ತನ್ನು ಗಳಿಸಿರುವ ಇಂತಹ ಅಧಿಕಾರಿಗಳ ಸಂಖ್ಯೆ ಎಷ್ಟಿರಬಹುದು? ಲೋಕಾಯುಕ್ತರ ಹುದ್ದೆ ಖಾಲಿ ಇದ್ದರೂ ಅವರ ಇದ್ದಾಗ ಮಾಡುವಂತಹ ಕೆಲಸವನ್ನು ಲೋಕಾಯುಕ್ತ ಪೊಲೀಸರು ಮಾಡಿದ್ದಾರೆ.ಹೀಗೇ ಬಡ್ತಿ ಪಡೆದವರು ಹಾಗೂ ನಿವೃತ್ತರಾಗಿರುವ ಭ್ರಷ್ಟರ ಅಕ್ರಮ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಲೋಕಾಯುಕ್ತ ಸಂಸ್ಥೆ ಮಾಡಬೇಕಿದೆ.

Post Comments (+)