ಭ್ರಷ್ಟಾಚಾರದಿಂದ ಭಾರತಕ್ಕೆ ಪ್ರತಿವರ್ಷ 16 ಶತಕೋಟಿ ಡಾಲರ್ ನಷ್ಟ: ಬೇಡಿ

7

ಭ್ರಷ್ಟಾಚಾರದಿಂದ ಭಾರತಕ್ಕೆ ಪ್ರತಿವರ್ಷ 16 ಶತಕೋಟಿ ಡಾಲರ್ ನಷ್ಟ: ಬೇಡಿ

Published:
Updated:
ಭ್ರಷ್ಟಾಚಾರದಿಂದ ಭಾರತಕ್ಕೆ ಪ್ರತಿವರ್ಷ 16 ಶತಕೋಟಿ ಡಾಲರ್ ನಷ್ಟ: ಬೇಡಿ

ಷಿಕಾಗೋ (ಪಿಟಿಐ): ಭ್ರಷ್ಟಾಚಾರದಿಂದಾಗಿ ಭಾರತವು ಪ್ರತಿವರ್ಷ 16 ಶತಕೋಟಿ ಅಮೆರಿಕನ್ ಡಾಲರ್ ಗಳನ್ನು ಕಳೆದುಕೊಳ್ಳುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆಯಾಗಿ ಪರಿವರ್ತನೆಗೊಂಡ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಇಲ್ಲಿ ಹೇಳಿದರು.ಜಾಗತಿಕ ವ್ಯವಹಾರಗಳ ಕುರಿತ ಷಿಕಾಗೋ ಕೌನ್ಸಿಲ್ ಸಂಘಟಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ~ಮೂಲ ಸವಲತ್ತುಗಳ ಸಲುವಾಗಿ ವಿನಿಯೋಗಿಸಲಾಗುವ ಪ್ರತಿ 100 ರೂಪಾಯಿಯಲ್ಲಿ ಕೇವಲ 16 ರೂಪಾಯಿ ಆ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಉಳಿದ 84 ರೂಪಾಯಿ ಕಳೆದುಹೋಗುತ್ತಿದೆ~ ಎಂದು ಅವರು ನುಡಿದರು.ಭಾರತವು ಭ್ರಷ್ಟಾಚಾರ ಮುಕ್ತವಾದರೆ ಅದು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ ಮತ್ತು ಅದು ಸಂಪೂರ್ಣ ಸಾಲಮುಕ್ತ ರಾಷ್ಟ್ರವಾಗುತ್ತದೆ ಎಂದು ಬೇಡಿ ಹೇಳಿದರು.~ಅಮೆರಿಕದಲ್ಲಿ ಎಲ್ಲ ಭಾರತೀಯರು ನಮ್ಮ ಭವಿಷ್ಯಕ್ಕಾಗಿ ಸಂಘಟಿತರಾಗಿ ದನಿ ಎತ್ತಬೇಕು ಎಂದು ನಾನು ಬಯಸುತ್ತೇನೆ~ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ಕಿರಣ್ ನುಡಿದರು.ಲೋಕಪಾಲ ಮಸೂದೆ ಬಗ್ಗೆ ಪ್ರಸ್ತಾಪಿಸಿದ ಅವರು ~ಹತ್ತಿಕ್ಕುವ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಭ್ರಷ್ಟಾಚಾರ ಹೆಚ್ಚಿದೆ. ಸಕಾರಾತ್ಮಕ ಬೆಳವಣಿಗೆಯಲ್ಲಿನ ಲೋಪದೋಷಗಳನ್ನು ನಿವಾರಿಸುವ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದೂ ಇದಕ್ಕೆ ಕಾರಣ~ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry