ಭ್ರಷ್ಟಾಚಾರದ ಜೊತೆ ರಾಜಿ ಇಲ್ಲ: ಕೇಜ್ರಿವಾಲ್‌

7

ಭ್ರಷ್ಟಾಚಾರದ ಜೊತೆ ರಾಜಿ ಇಲ್ಲ: ಕೇಜ್ರಿವಾಲ್‌

Published:
Updated:

ನವದೆಹಲಿ (ಪಿಟಿಐ): ‘ಭ್ರಷ್ಟಾಚಾರದ ಜೊತೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌  ಸ್ಪಷ್ಟಪಡಿಸಿದ್ದಾರೆ.  ‘ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಹರ್ಷ­ವರ್ಧನ್‌ ಒತ್ತಾಯಿಸಿದ್ದಾರೆ. ಸಾಕ್ಷ್ಯ ಒದಗಿಸಿದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿರುವೆ’ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.ಜ.10 ದಿಂದ ‘ಆಪ್‌’ ಸದಸ್ಯತ್ವ ಅಭಿಯಾನ: ಆಮ್‌ ಆದ್ಮಿ ಪಕ್ಷ ಜನವರಿ 10ರಿಂದ ಸದಸ್ಯತ್ವ ಅಭಿ­ಯಾನ ಆರಂಭಿಸಲಿದೆ ಎಂದು ಪಕ್ಷದ ಮುಖಂಡ ಯೋಗೇಂದ್ರ ಯಾದವ ತಿಳಿಸಿದ್ದಾರೆ.ಶಿವರಾಜ್‌ ನಿವಾಸದ ಎದುರು ಪ್ರತಿಭಟನೆ: ಭೋಪಾಲದಲ್ಲಿ ಎರಡು ಬಂಗ್ಲೆಗಳನ್ನು ಹೊಂದಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಮನೆ ಮುಂದಿನ ರಸ್ತೆಯಲ್ಲಿ ‘ಪೊರಕೆ’ಯಿಂದ ಕಸಗುಡಿಸಿ ‘ಆಮ್‌ ಆದ್ಮಿ’ ಪಕ್ಷದ (ಆಪ್‌) ಕಾರ್ಯಕರ್ತರು ಶನಿವಾರ ವಿನೂತನವಾಗಿ ಪ್ರತಿಭಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry