ಮಂಗಳವಾರ, ಏಪ್ರಿಲ್ 20, 2021
32 °C

ಭ್ರಷ್ಟಾಚಾರ ತಡೆಯಲು ರಕ್ತದಿಂದ ಹಸ್ತಾಕ್ಷರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಚಂದ್ರಶೇಖರ ಆಜಾದ್  ಬಲಿದಾನ ದಿನದ ಅಂಗವಾಗಿ ಹಾವೇರಿ ಜಿಲ್ಲಾ  ತಾಲ್ಲೂಕಿನ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟಸ್ಟ್‌ನಿಂದ ಭ್ರಷ್ಟಾಚಾರ ತಡೆಗಟ್ಟುವ ಹಾಗೂ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಮರಳಿ ತರಿಸಲು ಐದು ಸಾವಿರ ಹಸ್ತಾಕ್ಷರ ಪ್ರತಿಗಳನ್ನು ರಕ್ತ ದಿಂದ ಸಹಿ ಮಾಡಿದ ಪ್ರತಿಗಳನ್ನು ತಹ ಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ನಗರದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಷ್ಟ್‌ನ ಪದಾಧಿಕಾರಿಗಳು ಪಾದ ಯಾತ್ರೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿವಿಧಾನ ಸೌಧಕ್ಕೆ ಎಲ್ಲ ಪ್ರತಿಗಳನ್ನು ಸಲ್ಲಿಸಿದರು. ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಷ್ಟ್ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಚಿಂತಾ, ರವಿ ಬಿಜಾ ಪೂರ, ಡಾ.ಶಿವಾನಂದ ಹಿತ್ತಲಮನಿ, ಡಾ. ನೀಲಕಂಠ ಅಂಗಡಿ, ಉಮೇಶ ಪಟ್ಟಣಶೆಟ್ಟಿ, ಎಸ್.ಡಿ. ಹಾವನೂರು, ಗಣೇಶ ಬ್ಯಾಲಹುಣಸಿ, ಕುಮಾರ ಜಂಬಿಗಿ, ವಿಜಯ ಕಬ್ಬಿಣದ, ವಿರುಪಾಕ್ಷಪ್ಪ ಅಂಗಡಿ, ಸ್ಮೀತಾ ಅಂಗಡಿ, ಶ್ರೀದೇವಿ ಚಿಂತಾ, ವಜ್ಷೇಶ್ವರಿ ಲದ್ವಾ, ಆರ್.ಬಿ. ಪಾಟೀಲ,ಡಾ. ಚೌಡಾಳ, ಅಶೋಕ ಮಾರೀಹಾಳ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.