ಶುಕ್ರವಾರ, ಮೇ 27, 2022
23 °C

ಭ್ರಷ್ಟಾಚಾರ ತೊಲಗಿದರೆ ಬದುಕು ಸುಂದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಕೃತಿ ಮತ್ತು ನೆಲದ ನಿಯಮಗಳಿಗೆ ಒಳಪಟ್ಟು ಬಾಳಿದರೆ ಬದುಕು ಸುಂದರವಾಗುತ್ತದೆ ಎಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಬಸವರಾಜ ಎಸ್. ತಡಹಾಳ್ ಹೇಳಿದರು.ನಗರದ ಮೋತಿವೀರಪ್ಪ ಕಾಲೇಜಿನಲ್ಲಿ ಬುಧವಾರ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಮಾನವಹಕ್ಕುಗಳ ವೇದಿಕೆ ಆಶ್ರಯದಲ್ಲಿ ನಡೆದ ‘ಕಾನೂನು ಮತ್ತು ಸಮಾಜ ಸುಧಾರಣೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ವಿಶ್ವದಲ್ಲಿನ ಎಲ್ಲ ಜೀವಿಗಳಿಗಿಂತಲೂ ಮಾನವ ಕ್ಲಿಷ್ಟಕರ ಜೀವಿ. ಎಲ್ಲವೂ ನಿಯಮಗಳಿಗನುಸಾರವಾಗಿ ಬದುಕಿದರೆ ಆತ ಭಿನ್ನವಾಗಿ ಬದುಕುತ್ತಾನೆ. ಇದರಿಂದಾಗಿಯೇ ಎಷ್ಟೋ ಗೊಂದಲಗಳು ಸೃಷ್ಟಿಯಾಗುತ್ತಿವೆ. ಜಾತಿಯತೆ, ಭ್ರಷ್ಟಾಚಾರ ತೊಲಗಿದರೆ ಬದುಕು ಸುಂದರವಾಗುತ್ತದೆ ಎಂದು ನುಡಿದರು.ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಕಾನೂನು ನ್ಯಾಯಾಂಗ ಎಷ್ಟೇ ಪ್ರಬಲವಾಗಿದ್ದರೂ ದೇಶದಲ್ಲಿ ಕೆಲವು ಜನಾಂಗ ಮತ್ತು ಹಿತಾಸಕ್ತಿಗಳು ಸೇರಿ ತಮ್ಮದೇ ಆದ ನ್ಯಾಯ ವ್ಯವಸ್ಥೆ ಹೊಂದಿವೆ. ಸಮಾಜದಲ್ಲಿ ವರದಕ್ಷಿಣೆ, ಅಸ್ಪಶ್ಯತೆ, ಜಾತಿ ಪದ್ಧತಿ ಜೀವಂತವಾಗಿದೆ ಎಂದು ವಿಷಾದಿಸಿದರು. ಡಿಡಿಪಿಯು ರುದ್ರಮುನಿ, ಚಿಂತಕ ಪ್ರೊ.ಎಸ್.ಎಚ್. ಪಟೇಲ್ ಉಪಸ್ಥಿತರಿದ್ದರು.ಜಿ.ಬಿ. ಚಂದ್ರಶೇಖರಪ್ಪ ಕಾರ್ಯಕ್ರಮ ನಿರೂಪಿಸಿದರು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.