ಭ್ರಷ್ಟಾಚಾರ ಪಟ್ಟಿಯಲ್ಲಿ ಶ್ರೀಲಂಕಾ!

7

ಭ್ರಷ್ಟಾಚಾರ ಪಟ್ಟಿಯಲ್ಲಿ ಶ್ರೀಲಂಕಾ!

Published:
Updated:

ಕೊಲಂಬೊ (ಐಎಎನ್‌ಎಸ್‌): ವಿದೇಶಗಳಿಂದ ಅತ್ಯಂತ ಬೇಜವಾಬ್ದಾರಿಯುತವಾಗಿ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿರುವ 14 ರಾಷ್ಟ್ರಗಳಲ್ಲಿ ಶ್ರೀಲಂಕಾ ಕೂಡಾ ಒಂದು!ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆಯ ವರದಿ ಈ ವಿಷಯವನ್ನು ಬಹಿರಂಗಗೊಳಿಸಿದೆ.

ಶಸ್ತ್ರಾಸ್ತ್ರ ವಹಿವಾಟಿಗೆ ಸಂಬಂಧಿಸಿದಂತೆ 82 ರಾಷ್ಟ್ರಗಳಲ್ಲಿ ವಿಪರೀತ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬ ಸಂಸ್ಥೆಯ ವರದಿಯನ್ನು ಪತ್ರಿಕೆಯೊಂದು ವರದಿ ಮಾಡಿದೆ.

ಮಿತಿ ಮೀರಿದ ಭಷ್ಟಾಚಾರ ಮತ್ತು ಬೇಜವಾಬ್ದಾರಿಯುತವಾಗಿ ಶಸ್ತ್ರಾಸ್ತ್ರ ಆಮದಿಗೆ ಆಯಾ ರಾಷ್ಟ್ರಗಳ ಶಾಸಕಾಂಗಗಳೇ ನೇರ ಹೊಣೆ ಎಂದು ಆರೋಪಿಸಲಾಗಿದೆ.

ರಕ್ಷಣಾ ಇಲಾಖೆಗಳ ಮೇಲೆ ಸರ್ಕಾರಗಳಿಗೆ ನೇರ ಹಿಡಿತವಿಲ್ಲದ ಕಾರಣ ಸೇನಾ ವ್ಯವಹಾರಗಳಲ್ಲಿ ಭ್ರಷ್ಟಾಚಾರದ ಹಾವಳಿ ಮಿತಿ ಮೀರಿದೆ ಎಂದು ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry