ಶುಕ್ರವಾರ, ಜೂನ್ 25, 2021
22 °C

ಭ್ರಷ್ಟಾಚಾರ ವಿರುದ್ಧದ ಹೋರಾಟಗಾರರ ರಕ್ಷಣೆಗೆ ಕಾನೂನು: ಅಣ್ಣಾ ತಂಡದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ವಿರುದ್ಧದ ಹೋರಾಟಗಾರರ ರಕ್ಷಣೆಗೆ ಕಾನೂನು: ಅಣ್ಣಾ ತಂಡದ ಆಗ್ರಹ

ನವದೆಹಲಿ (ಐಎಎನ್‌ಎಸ್): ಮಧ್ಯಪ್ರದೇಶದಲ್ಲಿ ಗುರುವಾರ ಯುವ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್,  ಗಣಿ ಮಾಫಿಯಾಕ್ಕೆ ಬಲಿಯಾದ ಘಟನೆಯನ್ನು  ಬಲವಾಗಿ ಖಂಡಿಸಿರುವ ಅಣ್ಣಾ ತಂಡದ ಸದಸ್ಯರು, ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಹೋರಾಡುವವರ ರಕ್ಷಣೆಗಾಗಿ ಕಠಿಣ ಕಾನೂನನ್ನು ರೂಪಿಸಬೇಕೆಂದು ಆಗ್ರಹಿಸಿದ್ದಾರೆ.ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರು, ` ಭ್ರಷ್ಟಾಚಾರಿಗಳ ವಿರುದ್ಧ ಹೋರಾಡುವಾಗ ಮಾಫಿಯಾಗಳ ಹುನ್ನಾರದಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಕೆಲ ಸಚಿವರು ಸಂತಾಪ ಸೂಚನೆ ಪತ್ರ ಕಳುಹಿಸುವ ಬದಲು ಹೆಚ್ಚಿನದೇನೂ ಆಗುತ್ತಿಲ್ಲ~ ಎಂದು ವಿಷಾದಿಸಿದ್ದಾರೆ.

~ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅವರ ಸಂಖ್ಯೆಯನ್ನು ಕೇಂದ್ರ ಸರ್ಕಾರಕ್ಕೂ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಅದು, ಇನ್ನಾದರೂ  ಎಚ್ಚೆತ್ತುಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸಬೇಕು~ ಎಂದು ಶುಕ್ರವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.ಅಣ್ಣಾ ತಂಡ ಮತ್ತೊಬ್ಬ ಸದಸ್ಯೆ ಕಿರಣ್ ಬೇಡಿ ಅವರು, `ಭ್ರಷ್ಟ ರಾಜಕಾರಣಿಗಳು ಸರ್ಕಾರಿ ಆಡಳಿತವನ್ನು ಭ್ರಷ್ಟಗೊಳಿಸುತ್ತಿದ್ದು, ದುರ್ಬಲ ಪೊಲೀಸ್ ವರಿಷ್ಠಾಧಿಕಾರಿಗಳಿಂದಾಗಿ ಮಧ್ಯಪ್ರದೇಶದಲ್ಲಿ ಗುರುವಾರ ಯುವ ಐಪಿಎಸ್ ಅಧಿಕಾರಿಯೊಬ್ಬ ಬಲಿಯಾಗಿದ್ದಾನೆ~ ಎಂದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.