ಭ್ರಷ್ಟಾಚಾರ: 159 ಅಧಿಕಾರಿಗಳಿಗೆ ದಂಡ

7

ಭ್ರಷ್ಟಾಚಾರ: 159 ಅಧಿಕಾರಿಗಳಿಗೆ ದಂಡ

Published:
Updated:

ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಆರೋಪ ಹೊತ್ತ 159 ಸರ್ಕಾರಿ ಅಧಿಕಾರಿಗಳಿಂದ ದೊಡ್ಡ ಮೊತ್ತದ ದಂಡವನ್ನು ವಸೂಲಿ ಮಾಡುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಶಿಫಾರಸು ಮಾಡಿದೆ.

ಆ ಪೈಕಿ ಹೆಚ್ಚಿನವರು (28 ಜನ) ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ ಅಧಿಕಾರಿಗಳು. ರೈಲ್ವೆ ಸಚಿವಾಲಯದ 20 ಸಿಬ್ಬಂದಿ, ದೂಸಂಪರ್ಕ ಇಲಾಖೆ 18, ದೆಹಲಿ ಮಹಾನಗರ ಪಾಲಿಕೆ 15 ಸಿಬ್ಬಂದಿಯಿಂದ ದಂಡ ವಸೂಲು ಮಾಡುವಂತೆ ಸಿವಿಸಿ ಶಿಫಾರಸು ಮಾಡಿದೆ.  ಭ್ರಷ್ಟಾಚಾರ ಆರೋಪ ಹೊತ್ತವರಲ್ಲಿ ಬ್ಯಾಂಕ್ ಅಧಿಕಾರಿಗಳೂ ಸೇರಿದ್ದಾರೆ. ಕೆನರಾ ಬ್ಯಾಂಕ್‌ನ 10, ಸಿಂಡಿಕೇಟ್ ಬ್ಯಾಂಕ್‌ನ 9, ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ 7 ಮತ್ತು ದೇನಾ ಬ್ಯಾಂಕ್‌ನ ಐವರು ಅಧಿಕಾರಿಗಳು ಸೇರಿದ್ದಾರೆ.

ಅವ್ಯವಹಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಅಧಿಕಾರಿಗಳಿಂದ 21.66 ಕೋಟಿ ರೂಪಾಯಿಯನ್ನು ವಸೂಲು ಮಾಡಲಾಗಿದೆ. 

ಆಗಸ್ಟ್‌ನಲ್ಲಿ ವಿವಿಧ ಅಧಿಕಾರಿಗಳ ವಿರುದ್ಧ ದಾಖಲಾದ ಭ್ರಷ್ಟಾಚಾರದ 1,964 ದೂರುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಸಿವಿಸಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry