ಬುಧವಾರ, ಡಿಸೆಂಬರ್ 11, 2019
24 °C

ಭ್ರಷ್ಟ ಅಧಿಕಾರಶಾಹಿಯಿಂದ ಪ್ರಗತಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟ ಅಧಿಕಾರಶಾಹಿಯಿಂದ ಪ್ರಗತಿಗೆ ಹಿನ್ನಡೆ

ಮೈಸೂರು: ನಮ್ಮ ದೇಶದಲ್ಲಿ ಪ್ರತಿಭಾ ವಂತ ಶಿಲ್ಪಿಗಳು ಮತ್ತು ತಂತ್ರಜ್ಞರು ಇದ್ದಾರೆ. ಆದರೆ ಭ್ರಷ್ಟಾ ಚಾರ ಮತ್ತು ಅಧಿಕಾರಶಾಹಿಯ ದುರ್ನಡತೆ ಯಿಂದಾಗಿ ಅಭಿವೃದ್ಧಿ ಕುಂಠಿತವಾ ಗುತ್ತಿದೆ ಎಂದು ಸಂಸದ ಕೆ.ಎಸ್. ರಾವ್ ಆಕ್ರೋಶ ವ್ಯಕ್ತಪಡಿಸಿದರು.

 

ಶುಕ್ರವಾರ ಇಲ್ಲಿಯ ಎನ್‌ಐಇ ಕಾಲೇಜು ಒಳಾಂಗಣದಲ್ಲಿ ಆಯೋಜಿಸ ಲಾಗಿದ್ದ ಅಖಿಲ ಭಾರತ ಕಟ್ಟಡ ಶಿಲ್ಪಿಗಳ ಸಮ್ಮೇಳನದಲ್ಲಿ ಸ್ಮರಣಿಕೆ ಬಿಡುಗಡೆ ಮಾಡಿದ ಅವರು ಮಾತನಾಡಿದರು.`ಕಟ್ಟಡ ಶಿಲ್ಪಿಗಳು ಶ್ರೀಮಂತರು ಆದರೆ ಅನಕ್ಷರಸ್ಥರು ಎಂಬ ಭಾವನೆ ಹಲವರಲ್ಲಿದೆ. ಆದರೆ ಇಂದು ಕಾಲ ಬದಲಾಗಿದೆ. ಅವರೆಲ್ಲ ಇವತ್ತು ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಪದವಿಧರರಾಗಿದ್ದಾರೆ. ದೇಶ ನವನಿರ್ಮಾತೃಗಳಾಗಿದ್ದಾರೆ. ಆದರೆ ಅವರು ಸರ್ಕಾರ ವಹಿಸಿಕೊಟ್ಟ ಕೆಲಸವನ್ನು ದೇಶಕ್ಕಾಗಿ ಮಾಡಿದಾಗಲೂ ಸರ್ಕಾರಿ ಅಧಿಕಾರಿಗಳು ನಿಕೃಷ್ಟವಾಗಿ ಕಾಣುತ್ತಾರೆ. ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನಿರ್ಮಾಣ ಕಾರ್ಯದ ಬಗ್ಗೆ ಜ್ಞಾನವಿಲ್ಲದಿದ್ದರೂ ಕಾಮಗಾರಿಗಳ ಗುಣಮಟ್ಟದಲ್ಲಿ ತಪ್ಪು ಹುಡುಕುತ್ತಾರೆ. ಹಣ ಪಾವತಿಸಲು ವಿಳಂಬ ಧೋರಣೆ ಅನುಸರಿಸುತ್ತಾರೆ~ ಎಂದರು.`ಕಟ್ಟಡ ನಿರ್ಮಾಣಕಾರರು ತಮ್ಮ ಮತ್ತು ತಮ್ಮ ಕುಟುಂಬದ ಜೀವನವನ್ನು ಅಪಾಯಕ್ಕೊಡ್ಡಿ ಕೆಲಸ ನಿರ್ವಹಿ ಸುತ್ತಾರೆ. ಲಡಾಕ್‌ನಂತಹ ಶೀತಪ್ರದೇಶ, ಸಮುದ್ರಕ್ಕೆ ಸೇತುವೆ ಕಟ್ಟುವುದಿರಲಿ, ಈಶಾನ್ಯ ರಾಜ್ಯಗಳ ಕಡಿದಾದ, ದುರ್ಗಮ ಪ್ರದೇಶಗಳಲ್ಲಿ ಅವರು ಕಾರ್ಯ ನಿರ್ವಹಿಸಬೇಕು. ಆದರೆ ಅವರಿಗೆ ಸಿಗುತ್ತಿರುವ ಮರ್ಯಾದೆ ಮಾತ್ರ ಅಷ್ಟಕ್ಕಷ್ಟೇ. ಕಟ್ಟಡ ನಿರ್ಮಾ ಣಕಾರರು ಕೀಳರಿಮೆ ತೊರೆಯಬೇಕು. ಸಾಹಸಿ ಪ್ರವೃತ್ತಿಯ ನುರಿತ ಕೆಲಸ ಗಾರರು ಆಗಿರುವ ಅವರು ಯಾರಿಗೂ ಹೆದರಬೇಕಿಲ್ಲ. ಯಾರದೋ ಭ್ರಷ್ಟಾ ಚಾರಕ್ಕೆ ಶರಣಾಗಬೇಕಿಲ್ಲ. ನಿಮ್ಮಿಂದಲೇ ದೇಶದ ಅಭಿವೃದ್ಧಿ~ಎಂದು ಹೇಳಿದರು.ಕಾರ್ಯಕ್ರಮ ಮುಖ್ಯ ಅತಿಥಿ ಮೈಸೂರು ಸಂಸದ ಅಡಗೂರು ಎಚ್. ವಿಶ್ವನಾಥ, `ಅನುಭವ ಎನ್ನುವುದು ಸ್ವಂತ ಶ್ರಮದಿಂದಲೇ ಬರುವಂತದ್ದು. ಆಸ್ತಿ, ಅಂತಸ್ತುಗಳು ಪಿತ್ರಾರ್ಜಿತವಾಗಿ ಬರುವಂತೆ ಅನುಭವ ಬರುವುದಿಲ್ಲ. ಆದ್ದರಿಂದ ಶ್ರಮಪಟ್ಟು ಕಾರ್ಯ ನಿರ್ವಹಿಸುವವರಿಗೆ ಎಂದಿಗೂ ಸೋಲಿಲ್ಲ~ ಎಂದು ಹೇಳಿದರು.ಮುಖ್ಯ ಅತಿಥಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್, `ಐದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಭಾರತವು ಕಟ್ಟಡ ನಿರ್ಮಾಣ ತಂತ್ರಜ್ಞಾನದ ಹರಿಕಾರವೂ ಹೌದು. ಹರಪ್ಪ ಮೊಹೆಂಜೋದಾರ ಕಾಲದಿಂದಲೂ ಈಗಿನವರೆಗೂ ಎಲ್ಲ ರೀತಿಯ, ಎಲ್ಲ ದೇಶಗಳ ಉತ್ತಮ ತಂತ್ರಜ್ಞಾನ ಮತ್ತು ಶೈಲಿಗಳನ್ನು ಅಳವಡಿಸಿಕೊಂಡು ಬೆಳೆದಿರುವುದು ಹೆಮ್ಮೆಯ ಸಂಗತಿ~ ಎಂದರು.`ಇಂದು ಅಭಿವೃದ್ಧಿಯ ನಾಗಾಲೋಟದಲ್ಲಿ ನಮ್ಮ ಕಟ್ಟಡ ನಿರ್ಮಾಣಕಾರರ ಯೋಗದಾನ ದೊಡ್ಡದು. ಪುರಾತನ ಮತ್ತು ಆಧುನಿಕ ಗುಣಮಟ್ಟಗಳು ಮೇಳೈಸಿದ ತಂತ್ರಜ್ಞಾನ ಹಾಗೂ ಕಾಮಗಾರಿಗಳ ಅಗತ್ಯವಿದೆ. ನೂರಾರು ವರ್ಷಗಳ ಹಿಂದಿನ ಬೇಲೂರು, ಹಳೆಬೇಡು, ಮೈಸೂರಿನ ಪಾರಂಪರಿಕ ಕಟ್ಟಡ ನಿರ್ಮಾಣದ ತಂತ್ರಜ್ಞಾನ ಎಂದೆಂದಿಗೂ ಮಾದರಿ~ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಚೆರಿಯನ್ ವರ್ಕಿ, ಶ್ರೀರಾಮ್. ಅಬ್ಬಾಸ್ ನದಾಸ್‌ವಾಲಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)