ಭ್ರಾತೃತ್ವ ಸಂದೇಶ ಸಾರಿದ ವಾಂಗ್‌ಪುಯಿ ಕುಟ್

7

ಭ್ರಾತೃತ್ವ ಸಂದೇಶ ಸಾರಿದ ವಾಂಗ್‌ಪುಯಿ ಕುಟ್

Published:
Updated:
ಭ್ರಾತೃತ್ವ ಸಂದೇಶ ಸಾರಿದ ವಾಂಗ್‌ಪುಯಿ ಕುಟ್

ಬೆಂಗಳೂರು:  ಬೆಂಗಳೂರು ಮಿಜೋ ಅಸೋಸಿಯೇಷನ್ ನಗರದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಪಸರಿಸುವ ಉದ್ದೇಶದಿಂದ `ವಾಂಗ್‌ಪುಯಿ ಕುಟ್~ ಸಾಂಸ್ಕೃತಿಕ ವಿನಿಮಯ ಉತ್ಸವವನ್ನು ಮಂಗಳವಾರ ಹಮ್ಮಿಕೊಂಡಿತ್ತು.  ಈಶಾನ್ಯ ರಾಜ್ಯಗಳ ಸಾಮೂಹಿಕ ವಲಸೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಮಿಜೋರಾಂನ ಹಲವು ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು. ಡೊಳ್ಳು ಕುಣಿತ, ವೀರಗಾಸೆ, ಬ್ಯೂಮರಾಂಗ್ ರಾಕ್ ತಂಡ ಮತ್ತು ಮಿಜೋರಾಂನ ಸಾಂಸ್ಕೃತಿಕ ತಂಡಗಳು ವಿನೂತನ ಕಾರ್ಯಕ್ರಮ ನೀಡಿದವು.  ಕನ್ನಡ ಮತ್ತು ಸಂಸ್ಕೃತಿ  ಸಚಿವ ಗೋವಿಂದ ಕಾರಜೋಳ, `ಈಶಾನ್ಯ ಭಾರತದ ಮಿಜೋ ಸಮುದಾಯ ನಗರದಲ್ಲಿ ಸಾಂಸ್ಕೃತಿಕ ವಿನಿಮಯ ರೂಪದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ~ ಎಂದು ಶ್ಲಾಘಿಸಿದರು.ವಲಸೆಯ ಸಂದರ್ಭದಲ್ಲಿ ಈಶಾನ್ಯ ಭಾರತೀಯರಲ್ಲಿ ಆತ್ಮವಿಶ್ವಾಸ ತುಂಬಲು ಮಿಜೋ ಅಸೋಸಿಯೇಷನ್ ಮತ್ತು ಮಿಜೋರಾಂನ ಸರ್ಕಾರವೂ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿರುವುದನ್ನು ಪ್ರಶಂಸಿಸಿದರು. ಮಿಜೋರಾಂನ ಕಲೆ ಮತ್ತು ಸಂಸ್ಕೃತಿ ಸಚಿವ ಪಿ.ಸಿ.ಜೊರೊಮ್ ಸಾಂಗ್ಲಿಯಾನ , `ರಾಜ್ಯ ಮತ್ತು ಮಿಜೋರಾಂ ತಂಡಗಳು ಜತೆಯಲ್ಲಿಯೇ ನಗರದ ಜನತೆಗೆ ಮನರಂಜನೆ ನೀಡಿರುವುದು ಹೆಮ್ಮೆಯ ಸಂಗತಿ~ ಎಂದು ಹೇಳಿದರು.ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್‌ರುಕುಮ್ ಪಚಾವ್, ಉತ್ಸವದ ಅಧ್ಯಕ್ಷೆ ಲಾಲ್ರಿನ್‌ಪುಯಿ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry