ಭಾನುವಾರ, ಜೂನ್ 13, 2021
21 °C

ಭ್ರೂಣಲಿಂಗ ಪತ್ತೆಗೆ ಸಹಕರಿಸಿದರೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಭ್ರೂಣಲಿಂಗ ಪತ್ತೆಗೆ ಸಹಕಾರ ನೀಡುವವರು ಅಪರಾಧಿಗಳಾಗುತ್ತಾರೆ ಎಂದು ನ್ಯಾಯವಾದಿ ಜಯಂತಿ ಪಾಟೀಲ್ ತಿಳಿಸಿದರು.ಭ್ರೂಣಲಿಂಗ ಪತ್ತೆ ಶಾಸನ ಕಾಯ್ದೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹೆರಿಗೆ ಮುನ್ನ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಒಂದು ಸಲ ಅಪರಾಧ ಮಾಡಿದರೆ 50 ಸಾವಿರ ರೂಪಾಯಿ ದಂಡ 3 ವರ್ಷ ಶಿಕ್ಷೆ ಹಾಗೂ  2ನೇ ಬಾರಿ ಅಪರಾಧ ಮಾಡಿದಲ್ಲಿ 1 ಲಕ್ಷ ರೂಪಾಯಿ ದಂಡ ಐದು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.ವರದಕ್ಷಿಣೆಯಂತಹ ಪಿಡುಗುಗಳ ನಿರ್ಮೂಲನೆಯಿಂದ ಹೆಣ್ಣು ಮಕ್ಕಳ ಶೋಷಣೆ ತಪ್ಪಿಸಬಹುದು. ಭ್ರೂಣ ಪತ್ತೆ ಮೂಲಕ ಹೆಣ್ಣನ್ನು ವ್ಯವಸ್ಥಿತವಾಗಿ ನಿರ್ಮೂಲನೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.  ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್ ಮಾಡಿಸಬಹುದು ಎಂದು ಹೇಳಿದರು. ಭ್ರೂಣಲಿಂಗ ಪತ್ತೆ ಕಾಯ್ದೆ ಬಗ್ಗೆ ಜನರಿಗೆ ತಿಳವಳಿಕೆ ಮೂಡಿಸಬೇಕಾಗಿದೆ. ಹೆಣ್ಣು ಮಗುವಿನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸಹ ಹೋಗಲಾಡಿಸಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೊರೆಸ್ವಾಮಿ ತಿಳಿಸಿದರು.

 

ಈ ಕಾಯ್ದೆ 2003ರಲ್ಲಿ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಜನರಲ್ಲಿ ಜಾಗೃತಿ ಮೂಡಿಸಿದರೆ ಸಮಾಜದಲ್ಲಿ ಪರಿವರ್ತನೆ ಕಾಣಬಹುದಾಗಿದೆ ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುದಾಳೆ  ಮಾತನಾಡಿದರು.

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಾಬುರಾವ ಬೆಲ್ಲದ್ ಅಧ್ಯಕ್ಷತೆ ವಹಿಸಿದರು. ವಕೀಲರಾದ ಪದ್ಮಾ ಮಹಾರಾಜ, ಡಾ. ಸಿ.ಎಸ್. ರಗಟೆ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.