ಶುಕ್ರವಾರ, ಮೇ 27, 2022
21 °C

ಭ್ರೂಣಾವಸ್ಥೆಯಲ್ಲೇ ಕ್ಯಾನ್ಸರ್ ಗೆಡ್ಡೆ ನಿವಾರಣೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ತಾಯಿಯ ಗರ್ಭದಲ್ಲಿರುವಾಗಲೇ ಶಿಶುವಿನ ಬಾಯಲ್ಲಿ ಕಂಡುಬಂದಿದ್ದ ಕ್ಯಾನ್ಸರ್ ಗೆಡ್ಡೆಯನ್ನು ವೈದ್ಯರು ಯಶಸ್ವಿಯಾಗಿ ತೆಗೆದಿರುವ ಪ್ರಕರಣ ಇದೀಗ ಬಹಿರಂಗಗೊಂಡಿದೆ.ಇಂತಹ ಶಸ್ತ್ರಕ್ರಿಯೆ ಪ್ರಪಂಚದಲ್ಲಿ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.ತಾಯಿಯ ಗರ್ಭದಲ್ಲಿ ನಾಲ್ಕು ತಿಂಗಳ ಭ್ರೂಣವಾಗಿದ್ದಾಗಲೇ ಈ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಶಸ್ತ್ರಕ್ರಿಯೆ ನಡೆಸಿದ ಐದು ತಿಂಗಳ ಬಳಿಕ ತಾಯಿ ಆರೋಗ್ಯಯುತ ಹೆಣ್ಣು ಮಗುವಿಗೆ ಜನ್ಮ ನೀಡಿದರು.ಅಂದಹಾಗೆ, ಲೆಯ್ನಾ  ಗೊಂಜಲೇಜ್ ಎಂಬ ಹೆಸರಿನ ಮಗುವಿನ ವಯಸ್ಸು ಈಗ ಎರಡು ವರ್ಷ. ಮಗುವಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿರುವುದಕ್ಕೆ ಸಾಕ್ಷಿಯಾಗಿ ಬಾಯಿಯ ಬಳಿ ಸಣ್ಣ ಕಲೆಯಷ್ಟೇ ಉಳಿದಿರುವುದನ್ನು ಬಿಟ್ಟರೆ ಈಗ ಮತ್ತಾವ ತೊಂದರೆಯೂ ಇಲ್ಲ.ತಾಯಿ ಟ್ಯಾಮಿ ಅವರು ಗರ್ಭ ಧರಿಸಿ 17 ವಾರವಾಗುವ ಸಂದರ್ಭದಲ್ಲಿ ನಡೆಸಿದ ಸ್ಕ್ಯಾನಿಂಗ್‌ನಲ್ಲಿ, ಬೆಳೆಯುತ್ತಿದ್ದ ಶಿಶುವಿಗೆ ಗುಳ್ಳೆ ಇರುವುದು ಕಂಡು ಬಂದಿತ್ತು. ಮಗುವಿನ ಬಾಯಲ್ಲಿ ಇದ್ದುದು `ಓರಲ್ ಟೆರಟೊಮಾ~  ಎಂದು ಕರೆಯಲಾಗುವ ಅತಿ ಅಪರೂಪದ ಕ್ಯಾನ್ಸರ್ ಗೆಡ್ಡೆಯಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.ಎರಡು ವರ್ಷಗಳ ಹಿಂದೆ ಫ್ಲಾರಿಡಾದ ಜಾಕ್ಸನ್ ಸ್ಮಾರಕ ಆಸ್ಪತ್ರೆಯಲ್ಲಿ ಈ ಶಸ್ತ್ರಕ್ರಿಯೆ ನಡೆಸಲಾಗಿತ್ತು.

ಲೆಯ್ನಾಳ ತುಟಿಯಲ್ಲಿದ್ದ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲು ವೈದ್ಯರು ಲೇಸರ್ ಕಿರಣ ಬಳಸಿದ್ದರು. ಟ್ಯಾಮಿ ಅವರ ಗರ್ಭಕ್ಕೆ ಅತಿ ಸೂಕ್ಷ್ಮ ಸೂಜಿಯನ್ನು ಕಳುಹಿಸುವ ಮೂಲಕ ಶಸ್ತ್ರಕ್ರಿಯೆ ನಡೆಸಲಾಗಿತ್ತು.ಈ ಶಸ್ತ್ರಚಿಕಿತ್ಸೆಯ ವಿವರ ಅಮೆರಿಕ ವೈದ್ಯಕೀಯ ನಿಯತಕಾಲಿಕೆ ಆಬ್‌ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿಯಲ್ಲಿ ಪ್ರಕಟವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.