ಭ್ರೂಣ ಹತ್ಯೆ ತಡೆ: ಜನಜಾಗೃತಿಗೆ ಸ್ಕೇಟಿಂಗ್ ರ್ಯಾಲಿ
ಬೆಳಗಾವಿ: ಭ್ರೂಣ ಹತ್ಯೆ ತಡೆಯಿರಿ ಎಂಬ ಸಂದೇಶ ಹೊತ್ತು ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಹಮ್ಮಿಕೊಂಡಿರುವ ನವದೆಹಲಿ ಚಲೋ ಜಾಗೃತ ರ್ಯಾಲಿಗೆ ಸಂಸದ ಡಾ. ಪ್ರಭಾಕರ ಕೋರೆ ಬುಧವಾರ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು.
ರ್ಯಾಲಿಯು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ ಸೇರಿದಂತೆ ಮತ್ತಿತರ ರಾಜ್ಯಗಳ ಮೂಲಕ ಹಾಯ್ದು ಆ. 30 ರಂದು ನವದೆಹಲಿಯ ಸಂಸತ್ ಭವನಕ್ಕೆ ತಲುಪಲಿದೆ. ಒಟ್ಟು 2000 ಕಿ.ಮೀ. ಮಾರ್ಗದಲ್ಲಿ ಸಂಚರಿಸುವ ಮೂಲಕ ಭ್ರೂಣ ಹತ್ಯೆ ತಡೆಯಿರಿ, ಹೆಣ್ಣು ಮಗುವನ್ನು ಉಳಿಸಿರಿ ಎಂಬ ಸಂದೇಶ ಸಾರಿ ಜನಜಾಗೃತಿ ಮೂಡಿಸಲಿದೆ.
ನಗರದ ವಿವಿಧ ಶಾಲಾ- ಕಾಲೇಜುಗಳ 20 ಸ್ಕೇಟಿಂಗ್ ಪಟುಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಸಚೀನ ಪೆಡಣೇಕರ, ಶಾಂತಪ್ಪ ಬಾಗೇವಾಡಿ, ಸುಧಾಕರ ಜಾಧವ, ನಂದಾ ಪಾಟೀಲ, ತರಬೇತಿದಾರ ಸೂರ್ಯಕಾಂತ ಹಿಂಡಲಕರ, ಬಸವರಾಜ ಜವಳಿ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.