ಬುಧವಾರ, ನವೆಂಬರ್ 13, 2019
24 °C

ಮಂಕಿ ಕಮ್ಯುನಿಕೇಷನ್‌ನಿಂದ ಮಿಸ್ಡ್‌ಕಾಲ್‌ನಲ್ಲಿ ರಿಚಾರ್ಜ್ ಸೌಲಭ್ಯ

Published:
Updated:

ಒಂದು ಮಿಸ್ಡ್ ಕಾಲ್ ನೀಡಿದರೆ ಸಾಕು ನಿಮ್ಮ ಮೊಬೈಲ್ ಚಾರ್ಜ್ ಆಗುತ್ತದೆ! ಇಂತಹ ವಿನೂತನ ಸೇವೆಯನ್ನು ಜಾರಿಗೆ ತಂದಿರುವುದು ಮಂಕಿ ಕಮ್ಯುನಿಕೇಷನ್.ವೊಡಾಫೋನ್, ಏರ್‌ಟೆಲ್, ರಿಲಯನ್ಸ್, ಐಡಿಯಾ, ಟಾಟಾ ಇಂಡಿಕಾಂ, ಏರ್‌ಸೆಲ್, ಲೂಪ್ ಮೊಬೈಲ್, ಎಂಟಿಎನ್‌ಎಲ್, ಎಂಟಿಎಸ್, ಬಿಎಸ್‌ಎನ್‌ಎಲ್ ಫೋನ್ ಚಾರ್ಜ್ ಮಾಡಲಾಗುತ್ತದೆ. ಜೊತೆಗೆ ಡಿಶ್ ಟೀವಿ, ರಿಲಯನ್ಸ್, ಸನ್‌ಟಿ.ವಿ, ಟಾಟಾ ಸ್ಕೈ, ವಿಡಿಯೋಕಾನ್ ಮತ್ತು ವರ್ಜಿನ್ ಡಿಟಿಎಚ್‌ಗಳನ್ನೂ ಚಾರ್ಜ್ ಮಾಡಲಾಗುತ್ತದೆ.ಈ ಸೌಲಭ್ಯವನ್ನು ಬಯಸುವವರು ತಮ್ಮ ಸಂಖ್ಯೆಯನ್ನು ಮೊದಲೇ ಮಂಕಿ ಕಮ್ಯುನಿಕೇಷನ್‌ನಲ್ಲಿ ದಾಖಲಿಸಿಕೊಳ್ಳಬೇಕಾಗುತ್ತದೆ. ನಂತರ ಯಾವುದೇ ಕಾಲಮಿತಿಯಿಲ್ಲದೆ ಟೋಲ್ ಫ್ರೀ ಸಂಖ್ಯೆ 088268 87555ಕ್ಕೆ ಮಿಸ್ ಕಾಲ್ ನೀಡಿದರೆ ಕೆಲವೇ ಸೆಕೆಂಡಿನಲ್ಲಿ ಟಾಪ್‌ಅಪ್ ಚಾರ್ಜ್ ಮಾಡಲಾಗುತ್ತದೆ. ನೆಟ್ ಬ್ಯಾಂಕಿಂಗ್, ಮಂಕಿ ಬಗ್ಸ್, ಕ್ಯಾಶ್ ಪಿಕ್‌ಅಪ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಸೌಲಭ್ಯವಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಎಂದು ಮಂಕಿ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ:  www.munkey.in 

 

ಪ್ರತಿಕ್ರಿಯಿಸಿ (+)