ಮಂಗಲ: ಕುಡಿಯುವ ನೀರಿಗೆ ಹಾಹಾಕಾರ

7

ಮಂಗಲ: ಕುಡಿಯುವ ನೀರಿಗೆ ಹಾಹಾಕಾರ

Published:
Updated:

ಕೊಳ್ಳೇಗಾಲ: ಮಂಗಲ ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಗಳಲ್ಲಿ ಹಲ ವಾರು ತಿಂಗಳುಗಳಿಂದ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದ್ದರೂ ಸ್ಥಳೀಯ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಬಗೆಹರಿಸಲು ಮುಂದಾಗಿಲ್ಲ.ಈ ಗ್ರಾಮದಲ್ಲೇ ಪಂಚಾಯಿತಿ ಕಚೇರಿ ಇದೆ. ಹೊಸಬೀದಿ, ಕೋಣನಮಾರ ಮ್ಮನಬೀದಿ, ಮದ್ಯದ ಬೀದಿಗಳಲ್ಲಿ ಪರಿಶಿಷ್ಟ ಜನಾಂಗದವರೇ ವಾಸಮಾಡು ತ್ತಿದ್ದಾರೆ. ಬಹುತೇಕ ಜನರು ಕೂಲಿಮಾಡಿ ಜೀವನ ನಡೆಸುತ್ತಿದ್ದಾರೆ.

ಬೀದಿಗಳಲ್ಲಿ ಕುಡಿಯುವ ನೀರುಪೂರೈಕೆಗೆ ಅಳವಡಿಸಿ ರುವ ತೊಂಬೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರ ಪರಿಣಾಮ ವಾಗಿ ನಿತ್ಯವೂ ಮಹಿಳೆಯರು, ಮಕ್ಕಳು ಹತ್ತಿರದ ಪಂಪ್‌ಸೆಟ್ ಬಳಿಗೆ ತೆರಳಿ ನೀರು ತರುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.ನೀರು ಬರುವ ವೇಳೆಯನ್ನೇ ಕಾದಿದ್ದು ಮಹಿಳೆಯರು ತೊಂಬೆ ಬಳಿ ಜಮಾಯಿಸಿ ನೀರುಹಿಡಿಯಲು ಮುಗಿಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರದಲ್ಲಿ ಘರ್ಷಣೆ ನಡೆದಿವೆ. ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿ ಸರಿಯಾಗಿ ಬಾರದಿರುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂಬುದು ಭಾಗ್ಯಮ್ಮ, ರಾಜಮ್ಮ, ಪುಷ್ಪರ ದೂರು.ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಬಡ ಮಹಿಳೆಯರು ತೊಂದರೆಯಲ್ಲಿ ಸಿಲುಕಿದ್ದು, ಸಮರ್ಪಕ ನೀರು ಪೂರೈಸುವ ಬಗ್ಗೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.ಕುಡಿಯುವ ನೀರು ಸಮಸ್ಯೆ ಪರಿಹರಿಸಲು ತಕ್ಷಣವೇ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮಹಿಳಾ ಸಂಘಗಳ ಒಕ್ಕೂಟದ ವತಿಯಿಂದ ಖಾಲಿ ಬಿಂದಿಗೆ ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry