ಮಂಗಳನಲ್ಲಿ ಗಾಂಧೀಜಿ ಆಕೃತಿ ?

ಗುರುವಾರ , ಜೂಲೈ 18, 2019
22 °C

ಮಂಗಳನಲ್ಲಿ ಗಾಂಧೀಜಿ ಆಕೃತಿ ?

Published:
Updated:

ಲಂಡನ್ (ಐಎಎನ್‌ಎಸ್): ಮಂಗಳ ಗ್ರಹದಲ್ಲಿ ಮಹಾತ್ಮ ಗಾಂಧಿಯನ್ನು ಹೋಲುವ ಬೃಹದಾಕೃತಿಯೊಂದಿದೆಯೇ? ಇಟಲಿಯ ಗಗನ ವೀಕ್ಷಕ ಮ್ಯಾಟಿಯೊ ಲಾನಿಯೊ ತಾವು ಇಂತಹದೊಂದು ಆಕೃತಿಯೊಂದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ ಎಂದು `ಡೇಲಿ ಮೇಲ್~ ವರದಿ ಮಾಡಿದೆ.ಬೋಳು ತಲೆಯ ಆ ಮುಖಾಕೃತಿಯನ್ನು ಹೋಲುವ ಅಸ್ಪಷ್ಟ ಚಿತ್ರದ ಬಗ್ಗೆ ಪ್ರಸ್ತಾಪ ಇದೇ ಮೊದಲ ಸಲ ಕೇಳಿ ಬಂದಿರುವುದೂ ಅಲ್ಲ. 1976ರ ಜುಲೈನಲ್ಲಿ ಅಮೆರಿಕದ ವೈಕಿಂಗ್-1 ತೆಗೆದ ಚಿತ್ರದಲ್ಲಿ ಕೂಡಾ ಮಂಗಳ ಗ್ರಹದ ಮೇಲೆ ಇಂತಹದೇ ಮುಖವನ್ನು ಹೋಲುವ ಆಕೃತಿಯೊಂದು ಕಂಡು ಬಂದಿತ್ತು.2010ರಲ್ಲಿ `ನಾಸಾ~ ಮತ್ತೆ ಆ ಆಕೃತಿಯ ಬಗ್ಗೆ  ಸೂಕ್ಷ್ಮವಾಗಿ ಗಮನಿಸಿದ್ದು, `ಬೇರೇನೂ ಅಲ್ಲ, ಅದೊಂದು ಬೆಟ್ಟ ಅಷ್ಟೇ~ ಎಂದು ಸ್ಪಷ್ಟ ಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry