ಮಂಗಳನ ಪುಟ್ಟ ಶಿಲೆ ಬಲು ದುಬಾರಿ!

7

ಮಂಗಳನ ಪುಟ್ಟ ಶಿಲೆ ಬಲು ದುಬಾರಿ!

Published:
Updated:

ಲಂಡನ್ (ಪಿಟಿಐ): ಉಲ್ಕಾಪಾತದ ಸಂದರ್ಭದಲ್ಲಿ ಭೂಮಿಗೆ ಬಿದ್ದಿದ್ದ ಮಂಗಳ ಗ್ರಹದಲ್ಲಿ ರೂಪುಗೊಂಡಿದ್ದ ಪುಟ್ಟ ಶಿಲೆಯು ಅಮೆರಿಕದಲ್ಲಿ ನಡೆಯಲಿರುವ ಹರಾಜಿನಲ್ಲಿ 1.6 ಲಕ್ಷ ಪೌಂಡ್‌ಗೆ (ಸುಮಾರು 1,34,40,000 ರೂಪಾಯಿ) ಬಿಕರಿಯಾಗುವ ನಿರೀಕ್ಷೆ ಇದೆ.ಈ ಶಿಲೆಯು ಕೇವಲ 3.5 ಇಂಚು ಉದ್ದ ಮತ್ತು 326 ಗ್ರಾಂ ತೂಕ ಹೊಂದಿದೆ.ಲಕ್ಷಾಂತರ ವರ್ಷದ ಹಿಂದೆ ಕ್ಷುದ್ರಗ್ರಹವೊಂದು ಅಪ್ಪಳಿಸಿದ ಕಾರಣದಿಂದ ಮಂಗಳ ಗ್ರಹದಿಂದ ಶಿಲೆಯ ತುಂಡೊಂದು ಸಿಡಿದಿತ್ತು. ಅಂತರಿಕ್ಷದಲ್ಲಿ ಪ್ರಯಾಣಿಸುತ್ತಾ ಉಲ್ಕಾಪಾತದ ಭಾಗವಾಗಿ ಈ ಶಿಲೆಯು ಕಳೆದ ವರ್ಷ ಮೊರಾಕ್ಕೊದ ಮರುಭೂಮಿಯಲ್ಲಿ ಬಿದ್ದಿತ್ತು. ಟಿಸ್ಸಿಂಟ್ ಎಂಬ ಗ್ರಾಮದಲ್ಲಿ ಈ ಉಲ್ಕಾಶಿಲೆ ದೊರೆತಿದ್ದರಿಂದ ಅದಕ್ಕೆ ಟಿಸ್ಸಿಂಟ್ ಎಂಬ ಹೆಸರಿಡಲಾಗಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry