ಮಂಗಳನ ಬಂಡೆಯಲ್ಲಿ ಅಗ್ನಿಶಿಲೆ

7

ಮಂಗಳನ ಬಂಡೆಯಲ್ಲಿ ಅಗ್ನಿಶಿಲೆ

Published:
Updated:
ಮಂಗಳನ ಬಂಡೆಯಲ್ಲಿ ಅಗ್ನಿಶಿಲೆ

ವಾಷಿಂಗ್ಟನ್(ಪಿಟಿಐ): ಅಂಗಾರಕನ ಅಂಗಳದಲ್ಲಿ ನಾಸಾದ ವೈಜ್ಞಾನಿಕ ಪ್ರಯೋಗಾಲಯ `ಕ್ಯೂರಿಯಾಸಿಟಿ~ ರೋವರ್ ಅಗೆದು ತೆಗೆದಿರುವ ಬಂಡೆಯ ರಾಸಾಯನಿಕ ಸಂಯೋಜನೆ ಭೂಮಿಯ ಒಳಪದರದಲ್ಲಿರುವ ಅಗ್ನಿಶಿಲೆಗಳ ರಾಸಾಯನಿಕ ಸಂಯೋಜನೆಯನ್ನೇ ಹೋಲುತ್ತಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಚ್ಚರಿ ವ್ಯಕ್ತಪಡಿಸಿದೆ.ಮಂಗಳನ ಅಂಗಳದಲ್ಲಿ ದೊರೆತಿರುವ ಒಂದು ಬಂಡೆ ಭೂಮಿಯ ಕೇಂದ್ರ ಭಾಗದಲ್ಲಿರುವ ಅಪರೂಪದ ಅಗ್ನಿಶಿಲೆಗಳ ರಾಸಾಯನಿಕ ಸಂಯೋಜನೆಯನ್ನು ಹೋಲುತ್ತಿದೆ. ಆದರೆ ಭೂಮಿಯಲ್ಲಿ ಬಂಡೆಗಳು ರೂಪುಗೊಳ್ಳುವ ಪ್ರಕ್ರಿಯೆಯೇ ಇಲ್ಲೂ ನಡೆದಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆದರೂ ಬಂಡೆ ರೂಪುಗೊಳ್ಳುವ ಮೂಲದ ಬಗ್ಗೆ ಚಿಂತಿಸಲು ಈಗಿರುವ ಸ್ಥಳ ಪ್ರಶಸ್ತವಾಗಿದೆ~ ಎಂದು ಕ್ಯೂರಿಯಾಸಿಟಿ ಮಿಷನ್ ಉಸ್ತುವಾರಿ ಹೊತ್ತಿರುವ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಸಂಶೋಧಕ ಎಡ್ವರ್ಡ್ ಸ್ಟಾಪ್ಲರ್ ತಿಳಿಸಿದ್ದಾರೆ.ಮಂಗಳ ಗ್ರಹದಲ್ಲಿ ದೊರೆತ `ಫುಟ್‌ಬಾಲ್~ ಗಾತ್ರದ ಬಂಡೆಯ ರಾಸಾಯನಿಕ ಸಂಯೋಜನೆಯನ್ನು ಅಳೆಯಲು ಕ್ಯೂರಿಯಾಸಿಟಿ ರೋವರ್ ಎರಡು ಉಪಕರಣಗಳನ್ನು ಬಳಸಿದೆ. ಈ ಬಂಡೆಯ ರಾಸಾಯನಿಕ ಸಂಯೋಜನೆ ಮಂಗಳ ಗ್ರಹದಲ್ಲಿ ಬರಿಗಣ್ಣಿಗೆ ಕಾಣದ ಪರಿಸರ ಕೌತುಕಗಳನ್ನು ಮತ್ತು ಗ್ರಹಗಳು ರೂಪುಗೊಂಡ ಕಥೆಯನ್ನು ಹೇಳುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry