ಬುಧವಾರ, ನವೆಂಬರ್ 20, 2019
20 °C

ಮಂಗಳವಾರ, 17-7-1962

Published:
Updated:

ಮೈಸೂರಿನಲ್ಲಿ ಪಂಚಾಯಿತಿ ರಾಜ್ಯದ ಸುಳಿವೇ ಇಲ್ಲ

ಬೆಂಗಳೂರು, ಜುಲೈ 16- ಮೈಸೂರಿನಲ್ಲಿ `ನಿಜವಾದ~ ಪಂಚಾಯಿತಿ ರಾಜ್ಯವನ್ನು ಕಾಣಲು ನಾವು ನಡೆಸಿದ ಆರು ದಿನಗಳ ಪ್ರಯತ್ನ ಈವರೆಗೆ ಫಲದಾಯಕವಾಗಿಲ್ಲ ವೆಂದು ಕೇಂದ್ರ ಸಮುದಾಯ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವ ಶ್ರೀ ಎಸ್.ಕೆ.ಡೇ ಅವರು ಇಲ್ಲಿ ಇಂದು ಹೇಳಿದರು.ತೊಗಲಕ್ ರಾಜಧಾನಿ ಕೋಟೆ ಭಾಗದ ಪತ್ತೆ

ಔರಂಗಾಬಾದ್, ಜುಲೈ 16- ಹದಿನಾಲ್ಕನೆ  ಶತಮಾನದಲ್ಲಿ ದೌಲತಾಬಾದಿನಲ್ಲಿ ದೆಹಲಿ ದೊರೆ ಮೊಹಮ್ಮದ್ ಬಿನ್ ತೊಗಲಕ್ ನಿರ್ಮಿಸಿದ ರಾಜಧಾನಿಯ ಕೋಟೆಯ ಭಾಗ ಮತ್ತು ಗುರುತುಗಳನ್ನು ಕಳೆದ ಕೆಲವು ತಿಂಗಳುಗಳಿಂದ ಇಲ್ಲಿಗೆ ಸುಮಾರು 11 ಮೈಲಿ ದೂರದಲ್ಲಿರುವ ಐತಿಹಾಸಿಕ ಕೋಟೆಯಲ್ಲಿ ನಡೆಸಿದ ಸಂಶೋಧನಾ ಕಾರ‌್ಯದಲ್ಲಿ ಪತ್ತೆ ಹಚ್ಚಲಾಗಿದೆ.

 

ಪ್ರತಿಕ್ರಿಯಿಸಿ (+)