ಸೋಮವಾರ, ಜನವರಿ 27, 2020
21 °C

ಮಂಗಳವಾರ, 24–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶರಾವತಿ ಯೋಜನೆ ವಾರದಲ್ಲಿ ಶ್ವೇತಪತ್ರ

ಬೆಂಗಳೂರು, ಡಿ. 23 – ಬಹುಶಃ  ಇನ್ನೊಂದು ವಾರದಲ್ಲಿ ಶರಾವತಿ ಯೋಜನೆಗೆ ಸಂಬಂಧಿಸಿದ ಶ್ವೇತ­ಪತ್ರ­ವನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.ಈ ಯೋಜನೆಯ ಬಗ್ಗೆ  ಶ್ರೀ  ಎಸ್‌. ಎಂ. ಕೃಷ್ಣ ಹಾಗೂ ಶ್ರೀ ನಾಮೋಷಿ ಅವರುಗಳು ಪ್ರಶ್ನೆಗಳನ್ನು ಹಾಕಿದ್ದರು.ಸದ್ಯಕ್ಕೆ ಬ್ಯಾಂಕುಗಳ ರಾಷ್ಟ್ರೀಕರಣವಿಲ್ಲ

ನವದೆಹಲಿ, ಡಿ. 23 – ಸರ್ಕಾರವು ಸದ್ಯಕ್ಕೆ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಕೈಗೊಳ್ಳುವುದಿಲ್ಲವೆಂದು ಹಣಕಾಸಿನ ಸಚಿವ ಶಾಖೆಯ ಸ್ಟೇಟ್‌ ಸಚಿವ ಶ್ರೀ ಬಿ. ಆರ್‌. ಭಗತ್‌ ಅವರು ಇಂದು ರಾಜ್ಯ ಸಭೆಯಲ್ಲಿ ಪ್ರಕಟಿಸಿದರು.

ಪ್ರತಿಕ್ರಿಯಿಸಿ (+)