ಗುರುವಾರ , ಅಕ್ಟೋಬರ್ 17, 2019
22 °C

ಮಂಗಳವಾರ, 3-1-1962

Published:
Updated:

`ಭಿನ್ನಾಭಿಪ್ರಾಯ ಬದಿಗಿರಿಸಿ~

ಹೈದರಾಬಾದ್, ಜ. 2
- ಕಾಂಗ್ರೆಸಿಗರು ಚುನಾವಣೆಗಳು ಮುಗಿಯುವರೆಗಾದರೂ ತಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು ಚುನಾವಣೆಗಳಲ್ಲಿ ಕಾಂಗ್ರೆಸಿನ ಯಶಸ್ಸಿಗೆ ಶ್ರಮಿಸಬೇಕೆಂದು ಕೇಂದ್ರ ಅರ್ಥಸಚಿವ ಶ್ರೀ ಮೊರಾರ‌್ಜಿ ದೇಸಾಯಿಯವರು ಇಂದು ಒತ್ತಾಯ ಮಾಡಿದರು.ಸಂಸ್ಥೆಯಲ್ಲಿ ಗುಂಪುಗಳಿರುವುದು ಜನರ ಗುಂಪು ಮನೋಭಾವವನ್ನು ಪ್ರತಿಬಿಂಬಿಸುವುದೆಂದೂ, ಇಂಥ ಭಾವನೆ ಎಷ್ಟೋ ಶತಮಾನಗಳಿಂದ ಜನರಲ್ಲಿ ಇದೆಯೆಂದೂ ಸಿಕಂದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.1961ರ ಸ್ಕೇಲನ್ನು ಒಪ್ಪಲು ಇಚ್ಛೆಪಡದವರಿಗೆ ಹೆಚ್ಚಿನ ಭತ್ಯ

ಬೆಂಗಳೂರು, ಜ. 2
- 1961ರ ಜನವರಿ 1ರಿಂದ ಜಾರಿಗೆ ಬಂದ ಸಂಬಳದ ಸ್ಕೇಲನ್ನು ಒಪ್ಪಿಕೊಳ್ಳಲು ಇಚ್ಛೆಯನ್ನು ವ್ಯಕ್ತಪಡಿಸದಿದ್ದ ರಾಜ್ಯದ ಸರ್ಕಾರಿ ನೌಕರರ ಪೈಕಿ 255ರೂ.ಗಿಂತ ಕಡಿಮೆ ಮೂಲ ವೇತನ ಪಡೆಯುತ್ತಿರುವವರಿಗೆ ಹೆಚ್ಚಿನ ತುಟ್ಟಿ ಭತ್ಯ ನೀಡಬೇಕೆಂದು ಸರ್ಕಾರ ಆಜ್ಞೆ ಮಾಡಿದೆ.

Post Comments (+)