ಶನಿವಾರ, ಮೇ 8, 2021
26 °C

ಮಂಗಳವಾರ, 3-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಪಾಲರ ಭಾಷಣದ ಪ್ರತಿತುಳಿದ ಪ್ರಕರಣಬೆಂಗಳೂರು, ಏ. 2 - ವಂದನಾ ನಿರ್ಣಯದ ತಿದ್ದುಪಡಿಗಳ ಸೂಚಕರಿಗೆಲ್ಲ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ದೊರೆಯದಿದ್ದುದನ್ನು ಪ್ರತಿಭಟಿಸಿದ ಸೋಷಲಿಸ್ಟ್ ಸದಸ್ಯ ಶ್ರೀ ಎಸ್. ಗೋಪಾಲಗೌಡರು ರಾಜ್ಯಪಾಲರ ಭಾಷಣದ ಪ್ರತಿಯೊಂದನ್ನು ಕೆಳಕ್ಕೆ ಹಾಕಿ ತುಳಿದರು.ಇಡೀ ಸಭೆಯನ್ನು ಚಕಿತಗೊಳಿಸಿದ ಈ ವರ್ತನೆಯ ಬಗ್ಗೆ ಅಧ್ಯಕ್ಷ ಶ್ರೀ ವೈಕುಂಠ ಬಾಳಿಗ ಅವರು ತೀವ್ರ ಆಕ್ಷೇಪಣೆಯನ್ನು ಸೂಚಿಸಿ ಶ್ರೀ ಗೋಪಾಲಗೌಡರು ಭಾಷಣದ ಪ್ರತಿಯನ್ನು ತುಳಿಯುವಾಗ ಹೇಳಿದ ಮಾತನ್ನು ವರದಿಯಿಂದ ತೆಗೆದು ಹಾಕಲು ಆಜ್ಞೆ ಮಾಡಿದರು.ಪಾರ‌್ಲಿಮೆಂಟಿನ ಕಾಂಗ್ರೆಸ್ ಪಕ್ಷನಾಯಕರಾಗಿ ನೆಹರು ಆಯ್ಕೆನವದೆಹಲಿ, ಏ. 2 - ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷಕ್ಕೆ ಮತ್ತೆ ಐದು ವರ್ಷಗಳ ಕಾಲ ನಾಯಕರಾಗಿ ಇಂದು ಶ್ರೀ ಜವಹರಲಾಲ್ ನೆಹರು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.ಶ್ರೀ ಸತ್ಯನಾರಾಯಣ ಸಿನ್ಹ ಅವರು ನಾಯಕತ್ವಕ್ಕೆ ನೆಹರು ಅವರ ಹೆಸರನ್ನು ಸೂಚಿಸಿದಾಗ ಸಭೆಯಲ್ಲಿ ಸಂತೋಷ ವ್ಯಕ್ತಪಟ್ಟಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.