ಮಂಗಳವಾರ, 30-7-1963

7

ಮಂಗಳವಾರ, 30-7-1963

Published:
Updated:

ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ

ನವದೆಹಲಿ, ಜುಲೈ 29- ಗ್ರಾಮಾಂತರ ಪ್ರದೇಶಗಳ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಿ ಜನಸಾಮಾನ್ಯರಿಗೆ ಸುಖ ಸಂತೋಷಗಳನ್ನುಂಟು ಮಾಡಲು ಗ್ರಾಮಾಂತರ ಪ್ರದೇಶದಲ್ಲಿ ಕೈಗಾರಿಕೀಕರಣ ತೀವ್ರತರಗೊಳ್ಳಬೇಕೆಂದು ಪ್ರಧಾನಮಂತ್ರಿ ನೆಹರೂರವರು ಇಂದು ಇಲ್ಲಿ ಒತ್ತಾಯ ಪೂರ್ವಕವಾಗಿ ತಿಳಿಸಿದರು.`ತ್ರಿವೇಣಿ' ನಿಧನ

ಮೈಸೂರು, ಜುಲೈ 29- ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರಾದ `ತ್ರಿವೇಣಿ' (ಶ್ರೀಮತಿ ಅನುಸೂಯ)ರವರು ಇಂದು ಇಲ್ಲಿನ ಮಿಷಿನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಅವರು 20ಕ್ಕೂ ಹೆಚ್ಚಾಗಿ ಕಾದಂಬರಿಗಳು, ಅನೇಕ ಸಣ್ಣ ಕಥೆಗಳನ್ನು ಬರೆದಿದ್ದಾರೆ.

ಅವರ “ಅವಳ ಮನೆ” ಕಾದಂಬರಿಗೆ ರಾಷ್ಟ್ರಪತಿ ಪ್ರಶಸ್ತಿ ಮತ್ತು `ತಾವರೆಕೊಳ' ಕಾದಂಬರಿಗೆ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ದೊರೆತಿವೆ. ಶ್ರೀಮತಿ ಅನುಸೂಯಾರವರು ಶಾರದಾವಿಲಾಸ್ ಕಾಲೇಜಿನ ಅಧ್ಯಾಪಕರಾದ ಶ್ರೀ ಎಸ್.ಎನ್. ಶಂಕರ್‌ರವರ ಪತ್ನಿ. ಅವರಿಗೆ 11 ವರ್ಷ ವಯಸ್ಸಿನ ಮಗುವೊಂದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry