ಮಂಗಳವಾರ, 6-11-1962
ಚೀಣದೊಡನೆ ಸಂಧಾನವಿಲ್ಲ
ನವದೆಹಲಿ, ನ. 5 - `ಕನಿಷ್ಠ, ಲಡಖ್, ನಿಫಾ ಪ್ರದೇಶಗಳಲ್ಲಿ ಸೆಪ್ಟೆಂಬರ್ 8, 1962ಕ್ಕೆ ಮೊದಲಿದ್ದ ಯಥಾಸ್ಥಿತಿ ಏರ್ಪಡದೆ ಚೀಣ - ಭಾರತ ಗಡಿ ವಿವಾದ ಸಂಬಂಧದಲ್ಲಿ ಸಂಧಾನ ಅಸಾಧ್ಯ~ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಲಡಖ್ನಲ್ಲಿ ರಕ್ಷಣಾ ವ್ಯೆಹ
ನವದೆಹಲಿ, ನ. 5 - ಲಡಖ್ನಲ್ಲಿ ಉತ್ತಮ ರಕ್ಷಣಾ ವ್ಯೆಹ ರಚಿಸುವ ದೃಷ್ಟಿಯಿಂದ ಭಾರತದ ಪಡೆಗಳು ದೌಲತ್ ಬೇಗ್ ಒಲ್ದಿಯಿಂದ ಹಿಂದೆ ಸರಿದವು.
ದೌಲತ್ ಬೇಗ್ ಒಲ್ದಿಕರಕೊರಂ ಕಣಿವೆ ಬಳಿ ಇದೆ. ಈ ಪ್ರದೇಶ ಭಾರತದ ಭಾಗದಲ್ಲಿದೆ ಎಂದು ಈ ಮೊದಲು ಚೀಣೀಯರು ಅಧಿಕೃತವಾಗಿ ಒಪ್ಪಿದ್ದರು.
ಈ ಪ್ರದೇಶ 1960 ರಲ್ಲಿ ಚೀಣಿಯರು ತಮ್ಮದೆಂದು ಸಾರಿದ್ದ ಪ್ರದೇಶದ ಎಲ್ಲೆಗೆ ಪಶ್ಚಿಮಕ್ಕೆ ಎರಡು ಮೈಲಿ ದೂರದಲ್ಲಿದೆ.
ಷೇರು ಪೇಟೆ ಕುಸಿತ
ಮುಂಬೈ, ನ. 5 - ಮುಂಬೈ ಷೇರು ಪೇಟೆಯಲ್ಲಿ ಇಂದು ವಹಿವಾಟು ಆರಂಭದ ಸ್ವಲ್ಪ ಹೊತ್ತಿನಲ್ಲಿಯೇ ಧಾರಣೆಗಳು ಕುಸಿದುದರಿಂದ ವ್ಯಾಪಾರವನ್ನು ನಿಲ್ಲಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.