ಗುರುವಾರ , ನವೆಂಬರ್ 21, 2019
21 °C

ಮಂಗಳವಾರ, 9-4-1963

Published:
Updated:

ಸೇನಾ ಬಲ ದ್ವಿಗುಣಗೊಳಿಸಲು ನಿರ್ಧಾರ

ನವದೆಹಲಿ, ಏ. 8- `ಭಾರತದ ಪ್ರಸ್ತುತ ಸೇನಾ ಬಲವನ್ನು ಮುಂದಿನ ಕೆಲವು ವರ್ಷಗಳಲ್ಲಿ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರಕ್ಷಣಾ ಮಂತ್ರಿ ಶ್ರೀ ವೈ. ಬಿ. ಚವ್ಹಾಣ್ ಅವರು ಇಂದು ಲೋಕ ಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ತಿಳಿಸಿದರು.ಹಿಂದುಳಿದವರ ವರ್ಗೀಕರಣ ಆಧಾರದ ಬಗ್ಗೆ ತೀರ್ಮಾನ

ಬೆಂಗಳೂರು, ಏ. 8- ಸಾಮಾಜಿಕವಾಗಿ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ವರ್ಗೀಕರಣಕ್ಕೆ ಆಧಾರವನ್ನು ಮುಂದಿನ ಶಿಕ್ಷಣದ ವರ್ಷ ಆರಂಭವಾಗುವುದಕ್ಕೆ ಮುನ್ನ ತೀರ್ಮಾನಿಸಬೇಕಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನ ಸಭೆಯಲ್ಲಿ ಶ್ರೀ ಜಿ. ವೆಂಕಟೇಗೌಡರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)