ಮಂಗಳವಾರ, ನವೆಂಬರ್ 19, 2019
29 °C
ರಾಷ್ಟ್ರಪತಿಯಿಂದ ಕ್ಷಮಾದಾನ ಅರ್ಜಿ ತಿರಸ್ಕೃತ

ಮಂಗಳೂರಿನ ಪ್ರವೀಣ್‌ಗೆ ಗಲ್ಲು ಕಾಯಂ

Published:
Updated:

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗಲ್ಲುಶಿಕ್ಷೆಗೆ ಒಳಗಾದ 9 ಅಪರಾಧಿಗಳ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದು, ಇವರಲ್ಲಿ ಮಂಗಳೂರಿನ ಪ್ರವೀಣ್ ಕುಮಾರ್ ಸಹ ಸೇರಿದ್ದಾನೆ.ಒಟ್ಟು ಏಳು ಪ್ರಕರಣಗಳಲ್ಲಿ ಮರಣದಂಡನೆಗೆ ಒಳಗಾದ ಒಂಬತ್ತು ಜನರ ಕ್ಷಮಾದಾನದ ಅರ್ಜಿಗಳನ್ನು ರಾಷ್ಟ್ರಪತಿ ಮುಂದೆ ಇಡಲಾಗಿತ್ತು. 1994ರಲ್ಲಿ ತನ್ನ ಕುಟುಂಬದ ನಾಲ್ವರನ್ನು ಕೊಂದಿದ್ದ ಮಂಗಳೂರಿನ ಪ್ರವೀಣ್ ಕುಮಾರ್ ಅರ್ಜಿ ತಿರಸ್ಕೃತಗೊಂಡಿದೆ.1986ರಲ್ಲಿ ಉತ್ತರಪ್ರದೇಶದ ಒಂದೇ ಕುಟುಂಬದ 13 ಜನರನ್ನು ಕೊಲೆ ಮಾಡಿದ್ದ ಗುರ್ಮೀತ್ ಸಿಂಗ್, 1993ರಲ್ಲಿ ಹರಿಯಾಣಾದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಐದು ಜನರನ್ನು ಕೊಂದಿದ್ದ ಧರ್ಮಪಾಲ್,  2001ರಲ್ಲಿ ತನ್ನದೇ ಕುಟುಂಬದ ಎಂಟು ಜನರನ್ನು ಕೊಂದಿದ್ದ ಹರಿಯಾಣಾದ ಮಾಜಿ ಶಾಸಕರ ಮಗಳು ಸೋನಿಯಾ ಮತ್ತು ಆಕೆಯ ಪತಿ ಸಂಜೀವ್ ಇವರ ಕ್ಷಮಾದಾನದ ಅರ್ಜಿಗಳನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ.ತಮ್ಮ ಸಹೋದರನ ಕುಟುಂಬದ ಐವರು ಸದಸ್ಯರನ್ನು ಹತ್ಯೆಗೈದ ಸುರೇಶ್ ಮತ್ತು ರಾಮ್‌ಜಿ, 2002ರಲ್ಲಿ ತನ್ನ ಪತ್ನಿ ಮತ್ತು ಐವರು ಹೆಣ್ಣುಮಕ್ಕಳನ್ನು ಕೊಂದ ಉತ್ತರಪ್ರದೇಶದ ಜಾಫರ್ ಅಲಿ, 1989ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉತ್ತರಾಖಂಡದ ಸುಂದರ್ ಸಿಂಗ್ ಕ್ಷಮಾದಾನದ ಅರ್ಜಿಗಳು ಸಹ ತಿರಸ್ಕೃತಗೊಂಡಿವೆ.

ಪ್ರತಿಕ್ರಿಯಿಸಿ (+)