ಬುಧವಾರ, ನವೆಂಬರ್ 20, 2019
22 °C

ಮಂಗಳೂರು: ಅನಿಲ ಟ್ಯಾಂಕರ್ ಪಲ್ಟಿ ಇಬ್ಬರ ಸಾವು

Published:
Updated:

ಮಂಗಳೂರು (ಪಿಟಿಐ):  ಪುತ್ತೂರು ಸಮೀಪದ ಪರ್ನೆ ಬಳಿ ಅನಿಲ್ ಟ್ಯಾಂಕರ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ಅನಿಲ ತುಂಬಿದ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಬೆಂಕಿಯ ತೀವ್ರತೆಗೆ ರಸ್ತೆ ಸಮೀಪದ ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಮಗು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)