ಮಂಗಳೂರು ತಂಡದ ಗೆಲುವಿನ ಓಟ

7
ಅಖಿಲ ಭಾರತ ಅಂತರ ವಿ.ವಿ. ಮಹಿಳಾ ಕೊಕ್ಕೊ

ಮಂಗಳೂರು ತಂಡದ ಗೆಲುವಿನ ಓಟ

Published:
Updated:

ಮಂಗಳೂರು: ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ತಂಡಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟವನ್ನು ಮುಂದುವರಿಸಿವೆ. ಕೊಣಾಜೆಯ ಮೈದಾನದಲ್ಲಿ ಶನಿವಾರ ನಡೆದ ಲೀಗ್‌ ಹಂತದ ಮೂರನೇ ಪಂದ್ಯದಲ್ಲಿ ಆತಿಥೇಯ ತಂಡವು ಶಿವಾಜಿ ವಿ.ವಿ.ಯನ್ನು 17–6 ಅಂಕಗಳಿಂದ ಸೋಲಿಸಿತು. ಮಂಗಳೂರು ವಿ.ವಿ.ಯ ಶ್ರುತಿ 3.20 ನಿಮಿಷ ಔಟಾಗದೇ ಶಿವಾಜಿ ವಿ.ವಿ. ತಂಡದ ಆಟಗಾರರ ಬೆವರಿಳಿಸಿದ್ದ ಲ್ಲದೇ, 6 ಅಂಕಗಳನ್ನೂ ಸಂಪಾದಿಸುವ ಮೂಲಕ ತಂಡದ ಗೆಲುವಿಗೆ ನೆರವಾ ದರು. ಇನ್ನೊಬ್ಬ ಆಟಗಾರ್ತಿ ದೀಕ್ಷಾ 4.30 ನಿಮಿಷ ಔಟಾಗದೇ ಎದುರಾ ಳಿಗಳನ್ನು ಸತಾಯಿಸಿದರು. ಲೀಗ್‌ ಹಂತದ ಮೂರು ಪಂದ್ಯಗಳಲ್ಲಿ ಆತಿಥೇ ಯರು ಗೆಲುವು ಸಾಧಿಸಿದ್ದು, ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಮೈಸೂರು ವಿ.ವಿ. ತಂಡವು ಪುಣೆ ವಿ.ವಿ. ತಂಡವನ್ನು 7–6 ಅಂಕಗಳಿಂದ ಸೋಲಿಸಿತು. ನೇತ್ರಾವತಿ ಅವರು 4.30 ನಿಮಿಷ ಔಟಾಗದೇ ಉಳಿದಿದ್ದಲ್ಲದೇ, 1 ಅಂಕವನ್ನೂ ಸಂಪಾದಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದು ಲೀಗ್‌ ಪಂದ್ಯದಲ್ಲಿ ಮೈಸೂರು ವಿ.ವಿ ತಂಡವು ಗ್ವಾಲಿಯರ್‌ನ ಜಿವಾಜಿ ವಿ.ವಿ. ತಂಡವನ್ನು ಇನ್ನಿಂಗ್ಸ್‌ ಮತ್ತು 4 ಅಂಕಗಳಿಂದ (8–4) ಸೋಲಿಸಿತ್ತು.ಕಲ್ಲಿಕೋಟೆ ವಿ.ವಿ. ತಂಡವು ಗುಜರಾತ್‌ ವಿದ್ಯಾಪೀಠವನ್ನು ಇನ್ನಿಂಗ್ಸ್‌ ಮತ್ತು 18 ಅಂಕಗಳಿಂದ (20–2) ಸೋಲಿಸಿತು. ಪಟಿಯಾಲದ ಪಂಜಾಬ್‌ ವಿ.ವಿ. ತಂಡವು ಕಲ್ಯಾಣಿ ವಿ.ವಿ.ಯನ್ನು 10–7ರಿಂದ ಸೋಲಿ ಸಿತು. ಮುಂಬೈ ವಿ.ವಿ. ತಂಡವು ಕೇರಳ ವಿ.ವಿ.ಯನ್ನು 14–8ರಿಂದ ಸೋಲಿಸಿತು.  ಹಿಮಾಚಲ ಪ್ರದೇಶ ವಿ.ವಿ. ತಂಡವು ವೀರಭದ್ರ ಸಿಂಗ್‌ ಪೂರ್ವಾಂಚಲ ತಂಡವನ್ನು 10–4ರಿಂದ ಸೋಲಿಸಿತು.

ಪಂಜಾಬ್‌ ವಿ.ವಿ. ತಂಡವು ಗ್ವಾಲಿಯರ್‌ನ ಜಿವಾಜಿ ವಿ.ವಿ.ಯನ್ನು ಇನ್ನಿಂಗ್ಸ್‌ ಮತ್ತು 11 ಅಂಕಗಳಿಂದ (13–2) ಮಣಿಸಿತು. ನಾಗಪುರದ ಆರ್‌ಟಿಎಂ ವಿ.ವಿ. ತಂಡವು ಹಿಮಾಚಲ ಪ್ರದೇಶ ವಿ.ವಿ. ತಂಡವನ್ನು ಇನ್ನಿಂಗ್ಸ್‌ ಮತ್ತು 6 ಅಂಕಗಳಿಂದ (9–3) ಸೋಲಿಸಿತು. ಗುರುನಾನಕ್‌ ದೇವ್‌ ವಿ.ವಿ ತಂಡವು ಪಂಡಿತ್‌ ರವಿಶಂಕರ ವಿ.ವಿ. ತಂಡವನ್ನು ಇನ್ನಿಂಗ್ಸ್‌ ಮತ್ತು 4 ಅಂಕಗಳಿಂದ (9–5) ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry