ಮಂಗಳೂರು ದಸರಾಕ್ಕೆ ಕುದ್ರೋಳಿ ಸಜ್ಜು

6

ಮಂಗಳೂರು ದಸರಾಕ್ಕೆ ಕುದ್ರೋಳಿ ಸಜ್ಜು

Published:
Updated:

ಮಂಗಳೂರು: 101 ವರ್ಷಗಳ ಇತಿಹಾಸ ಇರುವ, ಸ್ವತಃ  ಬ್ರಹ್ಮಶ್ರೀ ನಾರಾಯಣ ಗುರುಗಳಿಂದಲೇ ಸ್ಥಾಪಿ­ತವಾದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ 23ನೇ ವರ್ಷದ ದಸರಾ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಅಕ್ಟೋಬರ್‌ 5ರಿಂದ 14ರವರೆಗೆ ಇಲ್ಲಿ ‘ಮಂಗಳೂರು ದಸರಾ’ ನಡೆಯಲಿದೆ.5ರಂದು ಬೆಳಿಗೆ್ಗ 11.30ಕ್ಕೆ ಶಾರದಾ ಮಾತೆ, ನವದುರ್ಗೆಯರು, ಆದಿಶಕಿ್ತ ಮತ್ತು ಮಹಾಗಣಪತಿ ಮೂರ್ತಿ­ಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸ­ಲಾಗುವುದು. ಅಕ್ಟೋಬರ್‌ 10ರಂದು ಸಂಜೆ 5.30ಕ್ಕೆ ಮಂಗಳೂರು ದಸರಾ ಮತ್ತು ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಧರ್ಮಸ್ಥಳದ ಧರ್ಮಾ­ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸುವರು ಎಂದು ದೇವ­ಸಾ್ಥನದ ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಾಯಿರಾಂ ಸೋಮ­ವಾರ ಇಲ್ಲಿ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿ­ದರು.ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ಪ್ರತಿ ದಿನ ಸಂಜೆ 6.30ರಿಂದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ­ಯಲಿವೆ. 5ರಂದು ಶಂಕರ್‌ ಶಾನು­ಭಾಗ್‌ ಅವರ ಗಾಯನ, 6ರಂದು ಜ್ಞಾನ ಐತಾಳ ಅವರ ನೃತ್ಯ, 7ರಂದು ಲಾವಣ್ಯ  ಅವರ ಸಂಗೀತ, 9ರಂದು ಪಲ್ಲವಿ ಪ್ರಭು ಅವರ ಹಾಡುಗಾರಿಕೆ, 12ರಂದು ಪುತ್ತೂರು ನರಸಿಂಹ ನಾಯಕ್‌ ಅವರಿಂದ ಗಾಯನ ಸಹಿತ ಹಲವು ಕಾರ್ಯಕ್ರಮಗಳಿವೆ ಎಂದು ಖಜಾಂಚಿ ಪದ್ಮರಾಜ್ ಆರ್‌. ತಿಳಿಸಿದರು.ಭವ್ಯ ಶೋಭಾಯಾತ್ರೆ: ಪ್ರತಿ ವರ್ಷ­ದಂತೆ ಈ ಬಾರಿಯೂ ಅ.14ರಂದು ಸಂಜೆ 4ಕ್ಕೆ ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆ ಆರಂಭವಾಗ­ಲಿದೆ. ಸುಮಾರು 9 ಕಿ.ಮೀ. ಸಾಗುವ ಮೆರವಣಿಗೆಯ ರಸೆ್ತಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಹಲ­ವಾರು ಸ್ತಬ್ಧಚಿತ್ರಗಳು ಮೆರಣಿಗೆಗೆ ಮೆರುಗು ನೀಡಲಿವೆ. ಕೇರಳದ ವಿವಿಧ ರೀತಿಯ ಚೆಂಡೆ ವಾದ್ಯಗಳು, ಸಾವಿರ­ಕ್ಕಿಂತಲೂ ಹೆಚ್ಚಿನ ಬಣ್ಣದ ಕೊಡೆಗಳು, ವಿವಿಧ ರಾಜ್ಯಗಳ ಕಲಾತಂಡಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಲಿವೆ ಎಂದು ಸಮಿತಿಯ ಆಡ­ಳಿತ ಮಂಡಳಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ಹೇಳಿದರು.ಆಡಳಿತ ಮಂಡಳಿಯ ರಾಘವೇಂದ್ರ ಕುಳೂರು, ಮಹೇಶ್ಚಂದ್ರ, ಬಿ.ಕೆ.ತಾರಾ­ನಾಥ, ದೇವೇಂದ್ರ ಪೂಜಾರಿ, ದೇವ­ದಾಸ್‌ ಕಂಟ್ರಾಕ್ಟರ್‌, ಡಾ.ಬಿ.ಜಿ.­ಸುವರ್ಣ, ಡಾ.ಅನುಸೂಯಾ,   ಲೀ­ಲಾಕ್ಷ ಕರ್ಕೇರ ಇತರರು ಇದ್ದರು.ಸಮಾಜ ಸುಧಾರಣಾ ಚಟುವಟಿಕೆ ಪ್ರತಿದಿನ

ಕಳೆದ ಒಂದೆರಡು ವರ್ಷಗಳಿಂದ ವಿಧವೆಯರಿಂದ ಪೂಜೆ, ಬೆಳ್ಳಿ ರಥ ಎಳೆಯುವಂತಹ ಸಮಾಜ ಪರಿವ­ರ್ತನಾ ಕಾರ್ಯಗಳಿಗೆ ಕುದ್ರೋಳಿ ಕ್ಷೇತ್ರ ಸಾಕ್ಷಿಯಾಗಿತ್ತು. ಈ ಬಾರಿಯ ದಸರಾ ಉತ್ಸವದ ಸಂದರ್ಭದಲ್ಲಿ ಅಂತಹ ಯಾವುದೇ ವಿಶೇಷ ಕಾರ್ಯ­ಕ್ರಮ ನಡೆಯುತಿ್ತಲ್ಲ.ಈ ಬಗೆ್ಗ ಸ್ಪಷ್ಟನೆ ನೀಡಿದ ಹರಿಕೃಷ್ಣ ಬಂಟ್ವಾಳ್‌, ದೇವಸ್ಥಾನದಲ್ಲಿ ಇದೀಗ ಪ್ರತಿ ದಿನ ಎಂಬಂತೆ ವಿಧವೆಯರಿಂದ ಪೂಜೆ ಸಹಿತ ಹಲವಾರು ಸಮಾಜ ಸುಧಾರಣಾ ಕ್ರಮಗಳು ನಡೆಯು­ತ್ತಲೇ ಇವೆ. ಹೀಗಾಗಿ ಈ ಬಾರಿ ವಿಶೇಷವಾಗಿ ಯಾವುದೇ ಕಾರ್ಯ­ಕ್ರಮ ಇಟ್ಟುಕೊಂಡಿಲ್ಲ ಎಂದರು.‘ಹೆಗ್ಗಡೆ ದಸರಾ ಉದ್ಘಾಟನೆಗೆ  ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 22 ವರ್ಷಗಳಿಂದಲೂ ಕುದ್ರೋ­ಳಿಗೆ ಬಂದಿಲ್ಲ ಎಂಬುದು ನಿಜ. ಆದರೆ ಅವರ ಸಹೋದರ ಹರ್ಷೇಂದ್ರ ಕುಮಾರ್‌ ಬಂದಿದ್ದಾರೆ. ಧರ್ಮಸ್ಥಳ­ದಿಂದ ಸ್ತಬ್ಧಚಿತ್ರಗಳನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದರು. ಹೆಗ್ಗಡೆ ಅವರು ಬರದೆ ಇದು್ದದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅವರು ಕ್ಷೇತ್ರಕ್ಕೆ ಬರಬೇಕು ಎಂಬ ಕಾರಣಕ್ಕಾಗಿಯೇ ಈ ಬಾರಿ ಅವರಿಂದಲೇ ದಸರಾ ಉದ್ಘಾ­ಟನೆ ಮಾಡಿಸಲಾಗುತ್ತಿದೆ, ಈ ಆಹ್ವಾ­ನ­ವನ್ನು ಅವರು ತುಂಬು ಹೃದಯ­ದಿಂದ ಸ್ವೀಕರಿಸಿದ್ದಾರೆ. ಅವರನ್ನು ಆಹ್ವಾನಿಸಿರುವುದು ಮತ್ತು ಜನಾ­ರ್ದನ ಪೂಜಾರಿ ಅವರ ಮುಂದಿನ ರಾಜಕೀಯ ನಡೆಗಳಿಗೆ ಯಾವುದೇ ಸಂಬಂಧವೂ ಇಲ್ಲ ಎಂದು ಹರಿಕೃಷ್ಣ ಬಂಟ್ವಾಳ್‌ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry