ಮಂಗಳೂರು, ಮೈಸೂರು ವಿ.ವಿ.ಗೆ ಜಯ

7
ದಕ್ಷಿಣ ವಲಯ ಅಂತರ ವಾರ್ಸಿಟಿ ಕ್ರಿಕೆಟ್: ಕುವೆಂಪು ನಿರ್ಗಮನ

ಮಂಗಳೂರು, ಮೈಸೂರು ವಿ.ವಿ.ಗೆ ಜಯ

Published:
Updated:

ಮಣಿಪಾಲ: ಶ್ರೀಕಾಕುಳಂನ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ತಂಡದ ಮೇಲೆ ಐದು ವಿಕೆಟ್‌ಗಳ ಅರ್ಹ ಜಯಪಡೆದ ಮಂಗಳೂರು ವಿಶ್ವವಿದ್ಯಾಲಯ, ಮಣಿಪಾಲ ವಿ.ವಿ. ಆಶ್ರಯದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ಮೂರನೇ ಸುತ್ತನ್ನು ತಲುಪಿತು.ಶನಿವಾರ ಉಡುಪಿಯ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಮಚಲಿಪಟ್ಟಣಮ್‌ನ ಕೃಷ್ಣ ವಿ.ವಿ. ಮೇಲೆ 89 ರನ್‌ಗಳ ಸುಲಭ ಜಯಪಡೆದ ಮೈಸೂರು ವಿಶ್ವವಿದ್ಯಾಲಯ ಕೂಡ ಮುನ್ನಡೆ ಸಾಧಿಸಿತು. ಆದರೆ ಶಿವಮೊಗ್ಗದ ಕುವೆಂಪು ವಿ.ವಿ. 18 ರನ್‌ಗಳಿಂದ ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ. ಎದುರು ಸೋತು ಟೂರ್ನಿಯಿಂದ ಹೊರಬಿತ್ತು.ಸುರತ್ಕಲ್‌ನ ಎನ್‌ಐಟಿಕೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಪವನ್ ಗೋಖಲೆ (28ಕ್ಕೆ5) ಮತ್ತು ಆಫ್ ಸ್ಪಿನ್ನರ್ ನಿಶಿತ್ ರಾಜ್ (32ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು ಅಂಬೇಡ್ಕರ್ ವಿಶ್ವವಿದ್ಯಾಲಯ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಮಂಗಳೂರು ವಿ.ವಿ. 25 ಓವರುಗಳ ಒಳಗೇ 5 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ನಿಶಿತ್ ಬ್ಯಾಟಿಂಗ್‌ನಲ್ಲೂ ಉಪಯುಕ್ತ 30 ರನ್‌ಗಳ ಕಾಣಿಕೆಯಿತ್ತರು.ಸ್ಕೋರುಗಳು: ಎನ್‌ಐಟಿಕೆ ಮೈದಾನ: ಡಾ.ಅಂಬೇಡ್ಕರ್ ವಿ.ವಿ., ಶ್ರೀಕಾಕುಳಂ: 45.5 ಓವರುಗಳಲ್ಲಿ 167 (ರಾಜಶೇಖರ್ 41, ಶ್ರೀನಿವಾಸ್ 68; ಪವನ್ ಗೋಖಲೆ 28ಕ್ಕೆ 5, ನಿಶಿತ್ ರಾಜ್ 32ಕ್ಕೆ3); ಮಂಗಳೂರು ವಿ.ವಿ: 24.4 ಓವರುಗಳಲ್ಲಿ  5 ವಿಕೆಟ್‌ಗೆ 170  (ಅಶ್ರೀನ್ 37, ಭರತ್ ಧುರಿ 40, ನಿಶಿತ್ ರಾಜ್ 30; ರಾಜಶೇಖರ್ 39ಕ್ಕೆ3).ಎಂಐಟಿ ಮೈದಾನ: ಕೆಎಲ್‌ಇ, ಬೆಳಗಾವಿ: 31.5 ಓವರುಗಳಲ್ಲಿ 89 (ಇಕ್ಬಾಲ್ 25, ಚಕ್ರಿ 7ಕ್ಕೆ3, ವಿನೋದ್ 5ಕ್ಕೆ2, ಡಿ.ಹರಿ 7ಕ್ಕೆ2);  ಜೆಎನ್‌ಟಿಯು, ಅನಂತಪುರ: 19.2 ಓವರುಗಳಲ್ಲಿ 1 ವಿಕೆಟ್‌ಗೆ 92 (ಕೇಶವ್ ಕುಮಾರ್ ಔಟಾಗದೇ 60).ಮಣಿಪಾಲ ವಿ.ವಿ. ಮೈದಾನ1: ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ, ಕೊಚ್ಚಿ: 41.3 ಓವರುಗಳಲ್ಲಿ 164 (ಅರ್ಜುನ್ 72, ಆರ್.ರಶೀದ್ 26, ಅನಿಸ್ ಉಲ್ ಹಕ್ 13ಕ್ಕೆ5, ವಿಜಯ್ 18ಕ್ಕೆ3); ಕುವೆಂಪು ವಿ.ವಿ., ಶಿವಮೊಗ್ಗ: 45 ಓವರುಗಳಲ್ಲಿ 9 ವಿಕೆಟ್‌ಗೆ 146 (ಅನೀಫ್ ಔಟಾಗದೇ 48, ಜಿ.ಭಾರ್ಗವ್ 33; ವೈಷ್ಣವ್ 26ಕ್ಕೆ4, ಸವಾಸ್ 18ಕ್ಕೆ2, ಕೃಷ್ಣಕುಮಾರ್ 25ಕ್ಕೆ2).ಮಣಿಪಾಲ ವಿ.ವಿ. ಮೈದಾನ2:

ಕಲ್ಲಿಕೋಟೆ ವಿಶ್ವವಿದ್ಯಾಲಯ
: 50 ಓವರುಗಳಲ್ಲಿ 181 (ವೈಶಾಖಚಂದ್ರನ್ 37, ಶ್ರಿಜಿತ್ ಪಿ.ಜೆ. 30, ಅಖಿಲ್ ಕೆ.ದಾಸ್ 30; ಎಂ.ಸತೀಶ್ ಕುಮಾರ್ 34ಕ್ಕೆ2, ಅಮೃತಂ 39ಕ್ಕೆ2, ಎಂ.ಅರ್ಜುನ್ ರಾಜ್ 17ಕ್ಕೆ2); ಎಂ.ಎಸ್.ಯು, ತಿರುನಲ್ವೇಲಿ: 22.1 ಓವರುಗಳಲ್ಲಿ 42 (ಪಿ.ಎಸ್.ನಿಶಾಂ 20ಕ್ಕೆ5, ಟಿ.ಎಸ್.ರಮೇಶ್ 14ಕ್ಕೆ4).ಎಂಜಿಎಂ ಕಾಲೇಜು ಮೈದಾನ: ಮೈಸೂರು ವಿಶ್ವವಿದ್ಯಾಲಯ: 50 ಓವರುಗಳಲ್ಲಿ 5 ವಿಕೆಟ್‌ಗೆ 293 (ಭರತ್ 88, ವಿನಯ್ 76, ಸಿಂಚನ್ 50; ನಾಗೇಶ್ವರ ರಾವ್ 54ಕ್ಕೆ3); ಕೃಷ್ಣ ವಿ.ವಿ., ಮಚಲಿಪಟ್ಟಣಮ್: 39.5 ಓವರುಗಳಲ್ಲಿ 204 (ಸುರೇಶ್ 44, ಮನು ರೇವಂತ್ 45; ಭರತ್ 31ಕ್ಕೆ4, ಪ್ರಜ್ವಲ್ 32ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry