ಮಂಗಳ ಗ್ರಹದಲ್ಲಿ ಜೀವಸಂಕುಲ ಅಸಾಧ್ಯ

7

ಮಂಗಳ ಗ್ರಹದಲ್ಲಿ ಜೀವಸಂಕುಲ ಅಸಾಧ್ಯ

Published:
Updated:

ಲಂಡನ್ (ಪಿಟಿಐ): ಮಂಗಳ ಗ್ರಹದಲ್ಲಿ ಜೀವಸಂಕುಲ ಬದುಕಲು ಅಸಾಧ್ಯ ಎಂದು ಬ್ರಿಟನ್ ವಿಜ್ಞಾನಿಗಳ ತಂಡವೊಂದು ಸ್ಪಷ್ಟ ಪಡಿಸಿದೆ.ಅಷ್ಟರಮಟ್ಟಿಗೆ ಅಲ್ಲಿನ ವಾತಾ ವರಣ ಶುಷ್ಕವಾಗಿದೆ ಎಂದೂ ಇಲ್ಲಿಂದ ಪ್ರಕಟವಾಗುವ `ಜಿಯೋ ಫಿಸಿಕಲ್ ರಿಸರ್ಚ್ ಲೆಟರ್ಸ್~ ನಿಯತಕಾಲಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟಗೊಂಡಿದೆ.ಮಂಗಳ ಗ್ರಹದಲ್ಲಿ ಅಮೆರಿಕಾದ `ನಾಸಾ~ ಸಂಸ್ಥೆಯ ಫೀನಿಕ್ಸ್  ಬಾಹ್ಯಾಕಾಶ ಕಾರ್ಯಕ್ರಮದ ಅನ್ವಯ 2008ರಲ್ಲಿ ಸಂಗ್ರಹಿಸಲಾದ ಮಣ್ಣನ್ನು ಸಂಶೋಧನೆಗೆ ಒಳ ಪಡಿಸಿದಾಗ ಈ ಸತ್ಯ ಹೊರಬಿದ್ದಿದೆ ಎಂದೂ ಆ ವರದಿಯಲ್ಲಿ ತಿಳಿಸಲಾಗಿದೆ.ಸುಮಾರು ಮೂರು ವರ್ಷಗಳ ಸತತ ಸಂಶೋಧನೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry