ಮಂಗಳ ಗ್ರಹದಲ್ಲಿ ಮನೆ ನಿರ್ಮಾಣ ಸಾಧ್ಯ: ಜಗಲಿ

7

ಮಂಗಳ ಗ್ರಹದಲ್ಲಿ ಮನೆ ನಿರ್ಮಾಣ ಸಾಧ್ಯ: ಜಗಲಿ

Published:
Updated:

ಲಕ್ಷ್ಮೇಶ್ವರ: ‘ಜಗತ್ತು ಇಂದು ತಾಂತ್ರಿಕ ವಿಷಯಗಳಲ್ಲಿ ಸಾಕಷ್ಟು ಮುಂದುವರೆದಿದ್ದು ಇಡೀ ಜಗತ್ತು ಕೈಯಲ್ಲಿರುವಾಗ ಮಂಗಳ ಗ್ರಹದಲ್ಲಿ ಮನೆ ನಿರ್ಮಾಣ ಅಸಾಧ್ಯವಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಚನ್ನಪ್ಪ ಜಗಲಿ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೃಜನ ಬಳಗದ ವತಿಯಿಂದ ನಡೆದ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ವಿಜ್ಞಾನ ಕೇಂದ್ರದ ಸದಸ್ಯರಿಗಾಗಿ ಈಚೆಗೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭ ದಲ್ಲಿ ರಾಕೆಟ್ ಮಾದರಿ ಯನ್ನು ಉಡಾಯಿಸುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್. ಸರ್ಜಾಪುರ, ತಾಲ್ಲೂಕಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಬಿ.ಎಸ್. ಹರ್ಲಾಪುರ, ಲಕ್ಷ್ಮೇಶ್ವರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಫ್. ಆದಿ, ಶಿಕ್ಷಣ ಸಂಯೋಜಕ ಎನ್.ಆರ್. ಸಾತಪುತೆ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಉಮಚಗಿ, ಲಕ್ಷ್ಮೇಶ್ವರ ದಕ್ಷಿಣ ಸಿಆರ್‌ಪಿ ಸಂಪನ್ಮೂಲ ವ್ಯಕ್ತಿ ಎನ್.ವೈ. ಕುರಿ, ಗುತ್ತಿಗೆದಾರ ಚಂದ್ರಕಾಂತ ಘಾಟಗೆ, ಮುತ್ತು ಗಡೆಪ್ಪನವರ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅನಿಲ ಮುಳಗುಂದ, ಬಿ.ಬಿ. ಕಳಸಾಪುರ, ಬಿ.ಎಂ. ಕುಂಬಾರ ಮತ್ತಿತರರು ಹಾಜರಿದ್ದರು. ಅಗಸ್ತ್ಯ ಅಂತರ ರಾಷ್ಟ್ರೀಯ ಪ್ರತಿಷ್ಠಾನದ ವಿಜ್ಞಾನ ಕೇಂದ್ರ ಜಿಲ್ಲಾ ಮುಖ್ಯಸ್ಥ ಸಂತೋಷ ಕುಮಾರ. ಬಿ. ಹಾಗೂ ಇತರರನ್ನು  ಸನ್ಮಾನಿಸಲಾಯಿತು.ಸೃಜನ ಬಳಗದ ಅಧ್ಯಕ್ಷ ಡಿ.ಎಚ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಜಿ.ಎಸ್. ಗುಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಕರ್ಕಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಫಕ್ಕೀರೇಶ ಮಕರಬ್ಬಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry