ಭಾನುವಾರ, ಏಪ್ರಿಲ್ 11, 2021
28 °C

ಮಂಗಳ ಯಾನ: ಐಎಸ್‌ಎಸ್ ಬಳಸಲಿರುವ ನಾಸಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಮುಂದಿನ ದಶಕಗಳಲ್ಲಿ ಅಮೆರಿಕ ಕೈಗೊಳ್ಳಲಿರುವ ಬಾಹ್ಯಾಕಾಶ ಯೋಜನೆಗಳಿಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ನಾಸಾ ಬಳಸಲಿದೆ. ಮಂಗಳ ಗ್ರಹಕ್ಕೆ  ಮಾನವನನ್ನು ಕಳುಹಿಸುವ ಮಹತ್ವಾಕಾಂಕ್ಷೆಯ ಯೋಜನೆ ಸಿದ್ಧತೆಯ ಮೊದಲ ಹಂತ ಇದಾಗಲಿದೆ ಎಂದು ನಾಸಾ ಹೇಳಿದೆ.‘ಭವಿಷ್ಯದ ಮಾನವಸಹಿತ ಅಂತರಿಕ್ಷ ಪರಿಶೋಧನಾ ಯೋಜನೆಗಳಿಗೆ ಮತ್ತು ನಾವು ನಡೆಸುತ್ತಿರುವ ಮಾನವಸಹಿತ ಅಂತರಿಕ್ಷ ಯೋಜನೆಗೆ ಅಂತರ       ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಆಧಾರವಾಗಲಿದೆ’ ಎಂದು ನಾಸಾ ಆಡಳಿತಗಾರ ಚಾರ್ಲ್ಸ್ ಬೋಲ್ಡನ್ ಅವರು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ ಐಎಸ್‌ಎಸ್ ಮತ್ತು ಮಂಗಳ ಗ್ರಹ ಸಮ್ಮೇಳನದಲ್ಲಿ ತಿಳಿಸಿದ್ದಾರೆ.‘ಅಂತರಿಕ್ಷದಲ್ಲಿ ಅಧ್ಯಯನ ನಡೆಸಲು ಮತ್ತು ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಾಗಿ  ಮುಂದಿನ ಹತ್ತು ವರ್ಷಗಳ ಅವಧಿಗೆ  ವಿವಿಧ ದೇಶಗಳೊಂದಿಗಿನ ಸಹಭಾಗಿತ್ವವನ್ನು ನಾವು ಮುಂದುವರಿಸಲಿದ್ದೇವೆ’ ಎಂದು ಹೇಳಿದ್ದಾರೆ. ಅತಿ ದೂರದ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿರುವ ಯೋಜನೆಗೆ ಅಗತ್ಯವಾದ ಜೀವಾಧಾರಕ ಮತ್ತು ತಂತ್ರಜ್ಞಾನಗಳ ಪರೀಕ್ಷೆಗಳಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೂಕ್ತ ವಾತಾವರಣವನ್ನು ಕಲ್ಪಿಸಲಿದೆ ಎಂದು ಚಾರ್ಲ್ಸ್ ಅವರು ಹೇಳಿದ್ದಾರೆ. 2030ರ ದಶಕದಲ್ಲಿ ಮಂಗಳ ಗ್ರಹಕ್ಕೆ ಮಾನಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.