ಮಂಗ ಹಿಡಿಯಲಷ್ಟೇ ಗೊತ್ತು!

7

ಮಂಗ ಹಿಡಿಯಲಷ್ಟೇ ಗೊತ್ತು!

Published:
Updated:
ಮಂಗ ಹಿಡಿಯಲಷ್ಟೇ ಗೊತ್ತು!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ತೋಟಗಾರಿಕೆ ಇಲಾಖೆ ಮಾತ್ರವಲ್ಲದೆ ಅರಣ್ಯ ಘಟಕವೂ ಇದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಈ ಘಟಕ, ರಸ್ತೆಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ನಗರದಲ್ಲಿ ಸಸ್ಯಕ್ಷೇತ್ರದ ವಿಸ್ತರಣೆ ಮಾಡುತ್ತದೆ ಎನ್ನುತ್ತದೆ ಬಿಬಿಎಂಪಿ ದಾಖಲೆ. ಸಾರ್ವಜನಿಕ ನಿವೇಶನ, ಕೆರೆ ದಂಡೆ, ಉದ್ಯಾನದಲ್ಲಿ ನೆಡುತೋಪು ಬೆಳೆಸುವ ಹೊಣೆಯನ್ನೂ ಈ ಘಟಕ ಹೊತ್ತಿದೆಯಂತೆ.ಒಣಗಿನಿಂತ, ಅಪಾಯಕಾರಿಯಾಗಿ ಪರಿಣಮಿಸಿದ ಮರ ಕತ್ತರಿಸಲು ಅನುಮತಿ ನೀಡುವ ಅಧಿಕಾರವನ್ನು ಈ ಘಟಕಕ್ಕೆ ನೀಡಲಾಗಿದೆ. ಮಳೆಗಾಲದಲ್ಲಿ ಮರಗಳು ಉರುಳಿಬಿದ್ದಾಗ ಅವುಗಳನ್ನು ತೆರವುಗೊಳಿಸುವುದೂ ಇದೇ ಘಟಕ. ‘ವನ್ಯಜೀವಿಗಳು ನಗರಕ್ಕೆ ನುಗ್ಗಿದಾಗ ಈ ಘಟಕ ಏನು ಮಾಡುತ್ತದೆ’ ಎಂದು ಪ್ರಶ್ನಿಸಿದರೆ, ‘ವನ್ಯಜೀವಿ ಸಂರಕ್ಷಣಾ ತಂಡ ರಚನೆ ಮಾಡಲಾಗಿದ್ದು, ಆ ತಂಡ ಪರಿಸ್ಥಿತಿಯನ್ನು ನಿಭಾಯಿಸುತ್ತದೆ’ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.ತಂಡದಲ್ಲಿರುವ ಸಂರಕ್ಷಕರು ಮಂಗ, ಹಾವು ಹಿಡಿಯುವ ಪರಿಣತಿಯನ್ನಷ್ಟೇ ಹೊಂದಿದ್ದಾರೆ. ಆನೆ, ಚಿರತೆಯಂತಹ ಪ್ರಾಣಿಗಳು ನುಗ್ಗಿದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕೌಶಲ ಅವರಲ್ಲಿಲ್ಲ. ಅಲ್ಲದೆ, ವನ್ಯಜೀವಿಗಳನ್ನು ಸೆರೆ ಹಿಡಿಯಲು ಬೇಕಾದ ಉಪಕರಣ ಅಥವಾ ತಂತ್ರಜ್ಞಾನ ಈ ಘಟಕದಲ್ಲಿಲ್ಲ. ಕಾಡು ಪ್ರಾಣಿ ನುಗ್ಗಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ರಾಜ್ಯ ಅರಣ್ಯ ಇಲಾಖೆಯನ್ನೇ ಬಿಬಿಎಂಪಿ ಅವಲಂಬಿಸಿದೆ.ಅಧಿಕಾರಿಗಳ ಪಡೆ:

ಒಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಇಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯಕ್ಕೆ ಒಬ್ಬರಂತೆ ಎಂಟು ಜನ ಉಪ ವಲಯ ಅರಣ್ಯಾಧಿಕಾರಿಗಳನ್ನು ಬಿಬಿಎಂಪಿ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry