ಮಂಜಣ್ಣ ಅಧ್ಯಕ್ಷ; ಗೀತಾ ಉಪಾಧ್ಯಕ್ಷೆ

7
ಚನ್ನರಾಯಪಟ್ಟಣ ಪುರಸಭೆ ಜೆಡಿಎಸ್ ಪಾಲು

ಮಂಜಣ್ಣ ಅಧ್ಯಕ್ಷ; ಗೀತಾ ಉಪಾಧ್ಯಕ್ಷೆ

Published:
Updated:

ಚನ್ನರಾಯಪಟ್ಟಣ:  ಪುರಸಭಾ ಅಧ್ಯಕ್ಷರಾಗಿ ಜೆಡಿಎಸ್‌ನ ಸಿ.ಜೆ. ಮಂಜಣ್ಣ, ಉಪಾಧ್ಯಕ್ಷೆಯಾಗಿ ಅದೇ ಪಕ್ಷದ ಜಿ.ಗೀತಾ ಶುಕ್ರವಾರ ಅವಿರೋಧ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಸಿ.ಜೆ. ಮಂಜಣ್ಣ, ಅನ್ಸರ್ ಬೇಗ್, ಸಿ.ಕೆ. ನಟರಾಜ್, ಕಲ್ಪನ ಸುರೇಶ್, ಕಾಂಗ್ರೆಸ್‌ನ ಬಿ. ನಾಗರಾಜು ಉಮೇದುವಾರಿಕೆ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಜಿ. ಗೀತಾ, ಮಂಜುಳಾ, ಶೋಭಾ ನಾಮಪತ್ರ ಸಲ್ಲಿಸಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ಮಂಜಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಹೊರತು ಪಡಿಸಿ ಉಳಿದವರು ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಅವಿರೋಧ ಆಯ್ಕೆ ಸುಗಮವಾಯಿತು.21 ನೇ ವಾರ್ಡ್‌ನಿಂದ ಮಂಜಣ್ಣ, 7ನೇ ವಾರ್ಡ್‌ನಿಂದ ಗೀತಾ  ಪುರಸಭೆಗೆ ಆಯ್ಕೆಯಾಗಿದ್ದರು. ತಹಶೀಲ್ದಾರ್ ಪಿ.ಜಿ. ನಟರಾಜ್ ಚುನಾವ ಣಾಧಿ ಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆಯ ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್ ಇದ್ದರು. ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ  ಜೆಡಿಎಸ್‌ನ 13, ಕಾಂಗ್ರೆಸ್ 8, ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಹೊರಗಡೆ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ನಲ್ಲೂರು ಗ್ರಾಮದ ಬಳಿ ಕಸವಿಲೇವಾರಿ ಮಾಡಲು ಜಾಗ ಗುರುತಿಸಲಾಗಿದ್ದು. ಇನ್ನು 4 ಎಕರೆ ಖರೀದಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಶ್ರಮಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry