ಮಂಜುನಾಥನ ಗುಣಗಾನ

7

ಮಂಜುನಾಥನ ಗುಣಗಾನ

Published:
Updated:
ಮಂಜುನಾಥನ ಗುಣಗಾನ

ಚಿತ್ರದ ಹೆಸರು `ಮಂಜುನಾಥ ಬಿ ಎ ಎಲ್‌ಎಲ್‌ಬಿ~. ನಾಯಕ ಜಗ್ಗೇಶ್. ಅಂದ ಮೇಲೆ `ಎದ್ದೇಳು ಮಂಜುನಾಥ ಚಿತ್ರದ ನೆನಪು ಇಲ್ಲದಿದ್ದರೆ ಹೇಗೆ? ಹೌದು. ಜಗ್ಗೇಶ್ ಮೊದಲಿಗೆ ಆ ಚಿತ್ರದ ನೆನಪಿಗೆ ಜಾರಿದರು. `ಎದ್ದೇಳು ಮಂಜುನಾಥ~ ತಮಗೆ ಐದು ವರ್ಷ ಬದುಕು ನೀಡಿತು. `ಮಂಜುನಾಥ ಬಿಎ ಎಲ್‌ಎಲ್‌ಬಿ~ ಮತ್ತೆ ಐದು ವರ್ಷ ಬದುಕು ನೀಡುವುದು ದಿಟ ಎಂದು ಭರವಸೆ ತುಂಬಿಕೊಂಡರು.ಅದು `ಮಂಜುನಾಥ ಬಿಎ ಎಲ್‌ಎಲ್‌ಬಿ~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. `ಯುವ ನಟರ ಸಿನಿಮಾಗಳು ಯಶಸ್ವಿಯಾದರೆ ಪರಭಾಷಾ ಚಿತ್ರಗಳನ್ನು ಕರ್ನಾಟಕದಿಂದ ಹೊರಗಿಡಬಹುದು. ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರಗಳಿಗೆ ಐದನೇ ಸ್ಥಾನ ದಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿದ್ದರೆ ಸಾಧನೆ ಸಾಧ್ಯ~ ಎಂದು ಜಗ್ಗೇಶ್ ಏರುದನಿಯಲ್ಲಿ ನುಡಿದರು.ಚಿತ್ರಕ್ಕಾಗಿ ಜಗ್ಗೇಶ್ ಕವಿ ಜಿ.ಪಿ.ರಾಜರತ್ನಂ ಬರೆದಿರುವ `ಬ್ರಹ್ಮ ನಿಂಗೆ ಜೋಡಿಸ್ತೀನಿ..~ ಹಾಡನ್ನು ಹಾಡಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಜಗ್ಗೇಶ್ `ಬ್ರಹ್ಮ..~ ಹಾಡನ್ನು ಹಾಡಿ ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರಿಗೆ ಅಚ್ಚರಿಯುಂಟು ಮಾಡಿದರಂತೆ. ಚಿತ್ರದ ನಿರೂಪಣೆಯನ್ನು ಮೆಚ್ಚಿಕೊಂಡ ವಿನಯ್ ಚಂದ್ರ, `ಎರಡು ಕುಡಿತದ ಹಾಡು, ಮತ್ತೆರಡು ಯುಗಳ ಗೀತೆ ಚಿತ್ರದಲ್ಲಿವೆ~ ಎಂದರು.`ಚಿತ್ರವಿಡೀ ಜಗ್ಗೇಶ್ ತಮ್ಮ ವಿಶೇಷ ಮ್ಯಾನರಿಸಂನಿಂದ ನಗಿಸುತ್ತಾರೆ. ಕೊನೆಯಲ್ಲಿ ಕತೆ ಇರುತ್ತದೆ. ಸಂಪೂರ್ಣ ಹಾಸ್ಯಮಯವಾದ ಈ ಸಿನಿಮಾವನ್ನು ನಿರ್ದೇಶಿಸುವುದೇ ಒಂದು ಖುಷಿ. ಜಗ್ಗೇಶ್ ಅವರ ನಟನೆಯನ್ನು ಕಂಡು ಬೆರಗಾದ ಸಂದರ್ಭಗಳು ಬಹಳಷ್ಟಿವೆ~ ಎಂದರು ನಿರ್ದೇಶಕ ಮೋಹನ್.ನಟಿ ಸ್ಫೂರ್ತಿ ಅವರಿಗೆ ಜಗ್ಗೇಶ್, ಚಿತ್ರದಲ್ಲಿ ನಟಿಸುವುದು ಹೆಮ್ಮೆಯೊಂದಿಗೆ ಸಂತಸದ ವಿಚಾರವಂತೆ. `ಮಂಜುನಾಥ ಬಿ ಎ ಎಲ್‌ಎಲ್‌ಬಿ~ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಇದೀಗ ಪ್ರಥಮ ಪ್ರತಿ ಸಿದ್ಧವಾಗುತ್ತಿದೆ. ಸಮಾರಂಭದಲ್ಲಿ ನಟರಾದ ಯೋಗೀಶ್, ಯಶ್, ನಟಿ ರಾಗಿಣಿ, ನಿರ್ಮಾಪಕ ಮುನಿರತ್ನ, ಥ್ರಿಲ್ಲರ್ ಮಂಜು, ದಿನೇಶ್ ಗಾಂಧಿ, ನಾಗೇಂದ್ರ ಮಾಗಡಿ, ಎನ್. ಎಂ. ಸುರೇಶ್, ಕೆ. ಮಂಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry