ಮಂಗಳವಾರ, ಮೇ 24, 2022
26 °C
ತಿಮ್ಮನಾಯಕನಹಳ್ಳಿಯಲ್ಲಿ ನಿಧಿಶೋಧನೆ

ಮಂಟಪ ಮಧ್ಯೆ ಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ನಿಧಿಗಾಗಿ ತಾಲ್ಲೂಕಿನ ಕೋಟೆ ತಿಮ್ಮನಾಯಕನಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಪುರಾತನ ಆಂಜನೇಯಸ್ವಾಮಿ ದೇಗುಲದಲ್ಲಿನ ಕಲ್ಲಿನ ಮಂಟಪದ ಒಳಭಾಗದಲ್ಲಿ ಗುಂಡಿ ತೋಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.ತಾಲ್ಲೂಕಿನ ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಟೆ ತಿಮ್ಮನಾಯಕಹಳ್ಳಿ ಗ್ರಾಮದ ಸುತ್ತಮುತ್ತ ಹೈದರಾಲಿ ಆಳ್ವಿಕೆಯಲ್ಲಿ ನಿರ್ಮಿಸಿದ ಪುರಾತನ ಸೀತಾರಾಮ, ಆಂಜನೇಯ ಹಾಗೂ ಹೊನ್ನಮ್ಮ, ಚೆನ್ನಮ್ಮ ದೇವಾಲಯಗಳಿವೆ. ಇಲ್ಲಿ ನಿಧಿ ಇರುವ ಶಂಕೆಯಿಂದ ದುಷ್ಕರ್ಮಿಗಳು ಆಗಿಂದಾಗ್ಗೆ ಪುರಾತನ ವಿಗ್ರಹಗಳನ್ನು ಕೆಡವಿ ನಿಧಿ ಶೋಧನೆಗಾಗಿ ದೇಗುಲಗಳಿಗೆ ಹಾನಿಮಾಡುತ್ತಿರುವುದು ಮೇಲಿಂದ ಮೇಲೆ ನಡೆಯುತ್ತಿವೆ.ಗುರುವಾರ ರಾತ್ರಿ ಆಂಜನೇಯಸ್ವಾಮಿ ದೇಗುಲದ ಮುಂಭಾಗದಲ್ಲಿ ಕಲ್ಲಿನ ಮಂಟಪದ ಒಳಭಾಗದಲ್ಲಿ ಅಗೆದು ದುಷ್ಕರ್ಮಿಗಳು ನಿಧಿಶೋದನೆ ನಡೆಸಿದ್ದಾರೆ. ಈಚೆಗೆ ಕೋಟೆಯ ಒಳಭಾಗದಲ್ಲಿ ಶಿವನ ದೇವಾಲಯದ ಮುಂದೆ ಇದ್ದಂತಹ ಗರಡುಗಂಭವನ್ನು ಉರುಳಿಸಿ ನಿಧಿಶೋಧನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಮೇಲಿಂದ ಮೇಲೆ ದುಷ್ಕರ್ಮಿಗಳು ಪುರಾತನ ದೇಗುಲಗಳಿಗೆ ಹಾನಿ ಮಾಡುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಕೋಟೆ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.