ಮಂಠಾಳ ಹೋಬಳಿ `ಪಿಂಚಣಿ ಅದಾಲತ್'

ಗುರುವಾರ , ಜೂಲೈ 18, 2019
22 °C

ಮಂಠಾಳ ಹೋಬಳಿ `ಪಿಂಚಣಿ ಅದಾಲತ್'

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದ ಜನಸ್ನೇಹಿ ಕೇಂದ್ರದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿತ್ತು.ಸಹಾಯಕ ಆಯುಕ್ತ ಪ್ರಕಾಶ ನಿಟ್ಟಾಲೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ಇಂಥ ಅದಾಲತ್ ನಡೆಸಲಾಗುತ್ತಿದೆ ಎಂದು ಹೇಳಿದರು. ತಹಸೀಲ್ದಾರ ಡಿ.ಎಂ.ಪಾಣಿ, ವೆಂಕಟಯ್ಯ ಪಾಲ್ಗೊಂಡು ಅಹವಾಲು ಸ್ವೀಕರಿಸಿದರು. ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ಮಾಸಾಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಈ ಸಂದರ್ಭದಲ್ಲಿ ಸ್ವೀಕರಿಸಲಾಯಿತು. ಅನೇಕ ಜನರು ತಮಗೆ ಮಂಜೂರಾದ ಹಣ ಬರುತ್ತಿಲ್ಲ ಎಂದು ಗೋಳು ತೋಡಿಕೊಂಡರು. ಒಂದೆರಡು ಸಲ ಹಣ ಕೊಟ್ಟು ನಂತರ ಏಕೆ ನಿಲ್ಲಿಸಲಾಯಿತು ಎಂದು ವೃದ್ಧರು ಪ್ರಶ್ನಿಸಿದರು.ರಾಜೇಶ್ವರ: ಗುರುವಾರ ತಾಲ್ಲೂಕಿನ ರಾಜೇಶ್ವರದ ಜನಸ್ನೇಹಿ ಕೇಂದ್ರದಲ್ಲಿ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಒಟ್ಟು 501 ಅರ್ಜಿಗಳು ಬಂದಿವೆ.ಸಂಧ್ಯಾ ಸುರಕ್ಷಾ- 345, ವೃದ್ಧಾಪ್ಯವೇತನ -23, ವಿಧವಾ ವೇತನ -86, ಅಂಗವಿಕಲರ ಮಾಸಾಶನಕ್ಕೆ ಸಂಬಂಧಿಸಿದ 47 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry