ಮಂಡಿ ಕೀಲು: ಯಶಸ್ವಿ ಶಸ್ತ್ರಚಿಕಿತ್ಸೆ

7

ಮಂಡಿ ಕೀಲು: ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:
ಮಂಡಿ ಕೀಲು: ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಅಮೆರಿಕದ ಮಹಿಳೆ ಯೊಬ್ಬರಿಗೆ ನಗರದ ಅಪೊಲೊ ಆಸ್ಪತ್ರೆಯಲ್ಲಿ ಮಂಡಿ ಕೀಲಿನ ಮರು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ತಜ್ಞ ವೈದ್ಯ ಡಾ.ಅರವಿಂದ ಡಿ.ಪಾಟೀಲ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಇದುವರೆಗೆ ಉನ್ನತ ದರ್ಜೆಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವುದು ಸಾಮಾನ್ಯವಾಗಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಕಡಿಮೆ ವೆಚ್ಚದ ಮತ್ತು ವಿಶ್ವ ದರ್ಜೆಯ ಚಿಕಿತ್ಸೆಗಾಗಿ ಅಲ್ಲಿನ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬರುತ್ತಿರುವುದು ಹೊಸ ಬೆಳವಣಿಗೆಯಾಗಿದೆ~ ಎಂದರು.`ಮಂಡಿ ನೋವಿನಿಂದ ಬಳಲುತ್ತಿದ್ದ ಅಮೆರಿಕದ ಅರಿಜೋನಾದ ಪೆನ್ನಿ ಫಿಲ್ಪಿ (53) ಆ ದೇಶದ ಆರೋಗ್ಯ ಸೇವಾ ಕ್ಷೇತ್ರದಲ್ಲಿ 20 ವರ್ಷಗಳ ಕಾಲ ಶಸ್ತ್ರಚಿಕಿತ್ಸಕ ಸಹಾಯಕಿಯಾಗಿ ಸೇವೆ ಸಲ್ಲಿಸಿದವರು. ಅದೇ ಕಾರಣಕ್ಕಾಗಿ ಅವರಿಗೆ ಅಲ್ಲಿಯೇ ಸಾಕಷ್ಟು ರಿಯಾಯಿತಿ ಸಿಗಬೇಕಾಗಿತ್ತು. ಆದರೆ ಅವರ ಚಿಕಿತ್ಸೆಗೆ 90 ಸಾವಿರ ಡಾಲರ್‌ಗೂ ಹೆಚ್ಚು ಹಣ ಬೇಕಾಗಿತ್ತು. ಅದಕ್ಕಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅವರಿಗೆ ಇಲ್ಲಿ ಚಿಕಿತ್ಸೆಯನ್ನು ನೆರವೇರಿಸಲಾಗಿದೆ~ ಎಂದು ಅವರು ವಿವರಿಸಿದರು.`ಅಮೆರಿಕದ ಆರೋಗ್ಯ ಕ್ಷೇತ್ರದಲ್ಲಿರುವ ಕಂಪೆನಿಗಳು ತಮ್ಮ ನಿಯಮಗಳನ್ನು ಜಟಿಲಗೊಳಿಸುತ್ತಾ ಅವುಗಳ ಪಾಲನೆ ಕಡ್ಡಾಯ ಗೊಳಿಸುತ್ತಿವೆ. ಅವು ರೋಗಿಗಳ ಪಾಲಿಗೆ ಹೊರೆಯಾಗಿರುವುದು ಭಾರತೀಯ ವೈದ್ಯಕೀಯ ಪ್ರಪಂಚಕ್ಕೆ ವರ ದಾನವಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವ ಫೆನ್ನಿ ಅವರು `ನನಗೆ ಅಮೆರಿಕದಲ್ಲಿ ಸಿಗಬಹುದಾದ ಗುಣಮಟ್ಟದ ಚಿಕಿತ್ಸೆ ಇಲ್ಲಿಯೂ ದೊರೆತಿದೆ~ ಎಂದು ಸಂತಸವನ್ನು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry