ಮಂಡೇಲಾ ಆರೋಗ್ಯ ದೇವರ ಕೈಯಲ್ಲಿ- ಮಾಜಿ ಪತ್ನಿ ವಿನ್ನಿ

ಭಾನುವಾರ, ಜೂಲೈ 21, 2019
27 °C

ಮಂಡೇಲಾ ಆರೋಗ್ಯ ದೇವರ ಕೈಯಲ್ಲಿ- ಮಾಜಿ ಪತ್ನಿ ವಿನ್ನಿ

Published:
Updated:

ಪ್ರಿಟೋರಿಯಾ (ಪಿಟಿಐ):  ನೆಲ್ಸನ್ ಮಂಡೇಲಾ ಅವರ ಈಗಿನ ಸ್ಥಿತಿಯನ್ನು ನೋಡುವುದು ತೀರಾ ನೋವಿನ ಸಂಗತಿ. ಆದರೆ ಇದು `ದೇವರ ಇಚ್ಛೆ'  ಎಂದು ಮಂಡೇಲಾ ಅವರ ಮಾಜಿ ಪತ್ನಿ ವಿನ್ನಿ ತಿಳಿಸಿದ್ದಾರೆ.ಮಂಡೇಲಾ ಅವರಿಗೆ ನೀಡಲಾಗಿರುವ ಜೀವರಕ್ಷಕಗಳನ್ನು (ಕೃತಕ ಉಸಿರಾಟ ಮತ್ತು ಇನ್ನಿತರ ವ್ಯವಸ್ಥೆ) ತೆಗೆದುಹಾಕುವುದರ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎಂಬುದನ್ನು ವಿನ್ನಿ ಅಲ್ಲಗಳೆದಿದ್ದಾರೆ.ವಿನ್ನಿ ಅವರು ಮಂಡೇಲಾ ಅವರನ್ನು 1958ರಲ್ಲಿ ವಿವಾಹವಾಗಿದ್ದು 1996ರವರೆಗೆ ಜೊತೆಯಲ್ಲಿದ್ದರು.ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆದು ಹಾಕುವುದು ಕ್ರೂರತನ ಮತ್ತು ನೋವಿನ ಕೆಲಸ. ಇಂತಹ ವಿಚಾರ ಚರ್ಚೆಯಾಗುತ್ತಿದೆ ಎಂಬುದು ಅರ್ಥಹೀನ ಎಂದು ವಿನ್ನಿ ಅವರು ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.`ಅಪ್ಪ ಜಾಗೃತರಾಗಿದ್ದಾರೆ,  ಹೊಸಬರನ್ನು ಅವರು ಗುರುತಿಸುತ್ತಾರೆ' ಎಂದು ಮಂಡೇಲಾ ಪುತ್ರಿ ಜಿಂಡ್ಜಿ ಮಂಡೇಲಾ ತಿಳಿಸಿದ್ದಾರೆ.ಅಭಿಮಾನಿಗಳು ಆಸ್ಪತ್ರೆ ಮತ್ತು ಮಂಡೇಲಾ ಅವರ ಮನೆಯ ಹೊರಗೆ ಪ್ರಾರ್ಥನೆಗಳನ್ನು ಕೈಗೊಂಡಿದ್ದಾರೆ.

ಪ್ರಿಟೋರಿಯಾದ ಮೆಡಿಕ್ಲಿನಿಕ್ ಹಾರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡೇಲಾ ಅವರ ಆರೋಗ್ಯ ಹದಗೆಟ್ಟಿದ್ದರೂ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry