ಬುಧವಾರ, ಮೇ 12, 2021
17 °C

ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಶ್ರವಣಬೆಳಗೊಳದ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು, ಐಐಟಿ ಖರಗ್‌ಪುರ ಇವರ ಸಂಯುಕ್ತಾಶ್ರಯ ದಲ್ಲಿ ಭಾನುವಾರ  ಏರ್ಪಡಿಸಿದ್ದ `ವಲಯ ಮಟ್ಟದ ರೋಬೋಟ್ ತಯಾರಿಸುವ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ~ ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸುವ ಮೂಲಕ 2012ರಲ್ಲಿ ಉತ್ತರ ಪ್ರದೇಶದ ಖರಗ್‌ಪುರ್ ನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ.ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಕೆ. ಅರುಣ್, ರಂಜಿತ್‌ಬಾಬು, ರಾಜನ್ ಶಿವ, ಚಂದನ್ ಡಿ. ನಾಡಿಗ್ ಎಂಬುವರು ರೋಬೋಟ್ ತಯಾರಿಸಿ 462.72 ಸೆ.ಮೀ. ದೂರವನ್ನು 8.63 ಸೆಕೆಂಡಿನಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು.ದ್ವಿತೀಯ ಸ್ಥಾನ ಮಂಡ್ಯದ ಅದೇ ಕಾಲೇಜಿನ ಪಾಲಾಯಿತು. ವಿದ್ಯಾರ್ಥಿಗಳಾದ ಪವನ್‌ಕುಮಾರ್, ಮೊಹಿನ್ ಖಾನ್, ಎಚ್. ವೆಂಕಟೇಶ್, ಜೆ. ಮಾಲತೇಶ್ ಅವರು ತಯಾರಿಸಿದ ರೋಬೋಟ್ 8.65 ಸೆಕೆಂಡಿನಲ್ಲಿ  ಪ್ರದರ್ಶನ ನೀಡಿದರು.ತೃತೀಯ ಸ್ಥಾನ ಶ್ರವಣಬೆಳಗೊಳದ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು ಪಾಲಾಯಿತು. ವಿದ್ಯಾರ್ಥಿಗಳಾದ ಸೋಹನ್ ದೋಷಿ, ಅಭಿನಂದನ್ ಡುಮ್, ಅಭಿನಂದನ್ ಪಾಟೀಲ್, ರಾಜು ಪಾಟೀಲ್ ತಂಡದಲ್ಲಿದ್ದರು. ಇವರು ತಯಾರಿಸಿದ ರೋಬೋಟ್ 8.79 ಸೆಕೆಂಡಿನಲ್ಲಿ ಕ್ರಮಿಸಿತು.ಪ್ರಥಮ ಸ್ಥಾನಗಳಿಸಿದ ಮಂಡ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅರುಣ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಉತ್ತಮ ಕಿಟ್ ನೀಡಿದರು. ಸ್ಪರ್ಧೆ ಕಠಿಣವಾಗಿತ್ತು. ತಂಡದಲ್ಲಿದ್ದ ಎಲ್ಲರ ಶ್ರಮದಿಂದ ಪ್ರಥಮ ಸ್ಥಾನಗಳಿಸಲು ಸಾಧ್ಯವಾಯಿತು. ಪಿಎಸ್‌ಎಸ್ ಕಾಲೇಜು ಉತ್ತಮ ಸಹಕಾರ ನೀಡುತ್ತ ಬಂದಿದೆ.ಖರಗ್‌ಪುರದಲ್ಲಿ ಜನವರಿ 2012ರಲ್ಲಿ  ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.ಕಾಲೇಜು ಡೀನ್ ಪ್ರೊ.ಜಿ.ಎಂ. ರಾವನವರ್. ಬಹುಮಾನ ವಿತರಿಸಿದರು. ಐಐಟಿ ಖರಗ್‌ಪುರ ಸಂಪನ್ಮೂಲ ವ್ಯಕ್ತಿಗಳಾದ ಅವಿನಾಶ್, ಆಕಾಶ್, ಸಂಯೋಜನಾಧಿಕಾರಿ ಶ್ರೀನಾಥ್, ವಿದ್ಯಾರ್ಥಿ ಸಂಯೋಜನಾಧಿಕಾರಿ ಉಲ್ಲಾಸ್ ಹಾಜರಿದ್ದರು.ವಲಯ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನಗಳಿದ ತಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.