ಮಂಗಳವಾರ, ನವೆಂಬರ್ 19, 2019
29 °C

ಮಂಡ್ಯ ಜಿಲ್ಲೆ: ಏಳು ಕ್ಷೇತ್ರಕ್ಕೆ 153 ನಾಮಪತ್ರ ಸಲ್ಲಿಕೆ

Published:
Updated:

ಮಂಡ್ಯ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆಗೆ 111 ಅಭ್ಯರ್ಥಿಗಳು ಒಟ್ಟು 153 ನಾಮಪತ್ರವನ್ನು ಸಲ್ಲಿಸಿದ್ದಾರೆ.ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಉಳಿದಂತೆ, ಮದ್ದೂರು ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು 24 ನಾಮಪತ್ರಗಳು; ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ 09 ಮಂದಿ 11 ನಾಮಪತ್ರಗಳು; ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 19 ಮಂದಿ, 27 ನಾಮಪತ್ರಗಳು; ಮಳವಳ್ಳಿ ಕ್ಷೇತ್ರದಲ್ಲಿ 18 ಮಂದಿ 22 ನಾಮಪತ್ರಗಳು; ಮೇಲುಕೋಟೆ ಕ್ಷೇತ್ರದಲ್ಲಿ 15 ಮಂದಿ, 19 ನಾಮಪತ್ರಗಳನ್ನು ಹಾಗೂ ನಾಗಮಂಗಲದಲ್ಲಿ 15 ಮಂದಿ, 24 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಮಂಡ್ಯ: 16 ಮಂದಿ

ಮಂಡ್ಯ: ವಿಧಾನಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಕಡೇ ದಿನವಾದ ಬುಧವಾರ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಉಪಾಧ್ಯಕ್ಷ, ಚಲನಚಿತ್ರ ನಟ ಅಂಬರೀಷ್, ಜೆಡಿ(ಎಸ್)ನಿಂದ ಎಂ.ಶ್ರೀನಿವಾಸ್ ಸೇರಿದಂತೆ ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಎಚ್.ಸಿ.ಶಿವರಾಮು (ಸರ್ವೋದಯ ಕರ್ನಾಟಕ ಪಕ್ಷ), ಡಿ.ವೆಂಕಟೇಶ್ ಆಚಾರ್ (ಕರ್ನಾಟಕ ಜನತಾ ಪಕ್ಷ),  ಮಹಮ್ಮದ್ ತಾಹೀರ್ (ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ), ಟಿ.ಎಲ್.ರವಿಶಂಕರ್ (ಬಿಜೆಪಿ), ಸೈಯದ್ ಉಲ್ಲಾ ಷರೀಫ್ (ಬಿಎಸ್‌ಆರ್ ಕಾಂಗ್ರೆಸ್). ಅಶೋಕ್ ಎಸ್.ಡಿ.ಜಯರಾಮ್, ಬಸವೇಗೌಡ, ಎ.ಎಸ್.ರವೀಂದ್ರ, ಎಚ್.ಎನ್.ಹರೀಶ್, ಪುಟ್ಟಸ್ವಾಮಿ, ಎಂ.ಆರ್. ಮುರಳೀಧರ ಎನ್.ಮುರಳಿ, ಎನ್.ನಂಜುಂಡಯ್ಯ, ಎಂ.ಎಸ್. ಗೋವರ್ದನ್ (ಪಕ್ಷೇತರರು) ಉಮೇದುವಾರಿಕೆ ಸಲ್ಲಿಸಿದ್ದಾರೆ.ಪಾಂಡವಪುರ: 13 ಮಂದಿ ಉಮೇದುವಾರಿಕೆ

ಪಾಂಡವಪುರ: ಮೇಲುಕೋಟೆ ವಿಧಾನ ಸಭಾಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ 13 ಮಂದಿ ನಾಮಪತ್ರ ಸಲ್ಲಿಸಿದರು.ಮಂಗಳವಾರ ಜಕ್ಕನಹಳ್ಳಿಯ ವಸಂತಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ  ಕೆ.ಎಸ್.ಪುಟ್ಟಣ್ಣಯ್ಯ ಬುಧವಾರವೂ ಕೂಡ ಮತ್ತೊಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಲ್.ಡಿ.ರವಿ ಅವರು ಮೂರು ನಾಮಪತ್ರ, ಬಿಜೆಪಿ ಪಕ್ಷದಿಂದ ಜಿ.ಎಂ.ರವೀಂದ್ರ ಎರಡು ನಾಮಪತ್ರವನ್ನು ಸಲ್ಲಿಸಿದರು.  ಬಿಎಸ್‌ಪಿಯಿಂದ ಎಂ.ಎಂ.ಮಹೇಶ್‌ಮಾಚಹಳ್ಳಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬಿ.ಎಸ್.ಉದಯಕುಮಾರ್, ಹಿಂದೂ ಸ್ಥಾನ್ ನಿರ್ಮಾಣ ದಳದಿಂದ ಸುಂಡಹಳ್ಳಿ ಸೋಮಶೇಖರ್, ಪಕ್ಷೇತರ ಅಭ್ಯರ್ಥಿಗಳಾಗಿ ಬನ್ನಂಗಾಡಿ ಪುಟ್ಟಣ್ಣಯ್ಯ, ಹಟ್ನ ಪುಟ್ಟಣ್ಣಯ್ಯ, ಕೆ.ಮಂಜುನಾಥ್, ಕಟ್ಟಡ ಕಾರ್ಮಿಕರ ಸಂಘದ ಎಸ್.ಆಲ್ಪರ್ಟ್ ನಾಮಪತ್ರ ಸಲ್ಲಿಸಿದರು.ಬಿಜೆಪಿ: ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ರವೀಂದ್ರ ಅವರು ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿ ಗೆಯಲ್ಲಿ ಸಾಗಿ ಮಿನಿವಿಧಾನಸೌಧ ತಲುಪಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ  ಬಿಜೆಪಿ ಅಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ಜಗದೀಶ್, ಮುಖಂಡರಾದ ಕಾಡೇನಹಳ್ಳಿ ನಾಗಣ್ಣಗೌಡ, ಗೋದ ಇತರರು ಇದ್ದರು.ಬಿಎಸ್‌ಆರ್: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎಸ್. ಉದಯಕುಮಾರ್ ಅವರು ಪಟ್ಟಣದ ಐದು ದೀಪ ವೃತ್ತದಿಂದ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ  ನಾಮಪತ್ರ ಸಲ್ಲಿಸಿದರು. ಪತ್ನಿ ಸ್ವಪ್ನ, ಮುಖಂಡರಾದ ಕೃಷ್ಣಪ್ಪ, ವಿಶ್ವನಾಥ್ ಇತರರು ಇದ್ದರು.ಶ್ರೀರಂಗಪಟ್ಟಣ 27 ನಾಮಪತ್ರ

ಶ್ರೀರಂಗಪಟ್ಟಣ: ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇದುವರೆಗೆ 19 ಮಂದಿ 27 ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕಡೇ ದಿನವಾದ ಬುಧವಾರ 12 ಜನರಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ ಟಿಕೆಟ್ ವಂಚಿತ ರವೀಂದ್ರ ಶ್ರೀಕಂಠಯ್ಯ ಪಕ್ಷೇತರರಾಗಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ (ಬಿ ಫಾರಂ ರಹಿತ) ಎರಡು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದಾರೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರ ಜತೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ತರಾತುರಿಯಲ್ಲಿ ನಾಮಪತ್ರ (ಬಿ ಫಾರಂ ಸಹಿತ) ಸಲ್ಲಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಎಸ್.ಎಲ್.ಲಿಂಗರಾಜು ಬುಧವಾರ ಮತ್ತೊಂದು ನಾಮಪತ್ರ ಹಾಕಿದರು.ಬಿಎಸ್ಪಿ ಅಭ್ಯರ್ಥಿಯಾಗಿ ರತ್ಮಮ್ಮ ಬಸವಯ್ಯ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಯ್ಯ ಅವರ ಜತೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ಪಕ್ಷೇತರರಾಗಿ ಸಿ.ಟಿ.ಹೇಮೇಶ್, ಕೆ.ಎನ್.ಮಂಜುನಾಥ್, ಪಿ.ಮಹದೇವಸ್ವಾಮಿ, ಎಚ್.ಎಂ.ಈರೇಗೌಡ, ಕೆ.ವಿ.ಕುಮಾರ್, ಎಂ.ಸುರೇಶ್, ಶಂಭುಲಿಂಗೇಗೌಡ ಹಾಗೂ ಎಂ.ಚಂದ್ರಶೇಖರ್ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ತಬಸ್ಸುಮ್ ಜಹೇರಾ ತಿಳಿಸಿದ್ದಾರೆ.ಮಳವಳ್ಳಿ: ಸೋಮಶೇಖರ್ ಸೇರಿ 18

ಮಳವಳ್ಳಿ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು ಒಟ್ಟು 9 ಮಂದಿ ನಾಮಪತ್ರ ಸಲ್ಲಿಸಿದ್ದು ಇದುವರೆಗೂ 18 ಜನ ನಾಮಪತ್ರ ಸಲ್ಲಿಸಿದ್ದಾರೆ.ಜೆಡಿಯುನಿಂದ ಮಾಜಿ ಸಚಿವ ಬಿ.ಸೋಮಶೇಖರ್, ಕಾಂಗ್ರೆಸ್ ಟಿಕೆಟ್ ವಂಚಿತರಾದ ಡಾ.ಮೂರ್ತಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ, ಬಿಜೆಪಿಯಿಂದ ದೋರನಹಳ್ಳಿ ಕುಮಾರಸ್ವಾಮಿ, ಮುತ್ತುರಾಜು ಸಮಾಜವಾದಿ ಪಾರ್ಟಿ, ನಂಜುಂಡಯ್ಯ ನ್ಯಾಷನಲ್ ಪೀಪಲ್ ಪಾರ್ಟಿ, ಹಾಗೂ ಪಕ್ಷೇತರರಾಗಿ ಅಂಗವಿಕಲ ವ್ಯಕ್ತಿ ಕೃಷ್ಣಮೂರ್ತಿ, ಆರ್.ಎಂ.ನಂಜುಂಡಸ್ವಾಮಿ, ಪುಟ್ಟಸ್ವಾಮಿ,ಎಚ್.ಮಹದೇವ ನಾಮಪತ್ರ ಸಲ್ಲಿಸಿದರು.24 ಮಂದಿ ನಾಮಪತ್ರ ಸಲ್ಲಿಕೆ

ಮದ್ದೂರು: ಕ್ಷೇತ್ರ ವಿಧಾನಸಭಾ ಚುನಾವಣೆಗೆ 14ಮಂದಿಯಿಂದ ಒಟ್ಟು 24ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.ಜಿ.ಎಂ.ಮಧು(ಕಾಂಗ್ರೆಸ್), ಡಿ.ಸಿ.ತಮ್ಮಣ್ಣ(ಜೆಡಿಎಸ್), ಬಿ.ಎಂ. ವನಜಾಕ್ಷಿರಾಮರಾಜು(ಬಿಜೆಪಿ), ಕೆ.ಶಿವಾನಂದ(ಬಿಎಸ್‌ಆರ್), ಆನಂದ್‌ರೆಡ್ಡಿ(ಕೆಜೆಪಿ), ಕೆ.ಎಚ್.ಯೋಗೇಶ್(ಹಿಂದೂಸ್ತಾನ್ ಜನತಾಪಾರ್ಟಿ), ಎಚ್.ಎಸ್.ಬೋರಮ್ಮ(ಬಿಎಸ್‌ಪಿ), ಕಲ್ಪನ ಸಿದ್ದರಾಜು, ವೆಂಕಟೇಶ್, ಎಂ.ರವಿಶಂಕರ್, ಕುಮಾರ್, ನಿಂಗೇಗೌಡ, ಎಸ್.ದೇವರಾಜು, ನದೀಂಬೇಗ್(ಪಕ್ಷೇತರರು)ರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಏ.20ನಾಮಪತ್ರ ಹಿಂಪಡೆಯಲು ಅಂತಿಮ  ದಿನವಾಗಿದೆ.

ಪ್ರತಿಕ್ರಿಯಿಸಿ (+)