ಮಂಡ್ಯ: ರೂ 1.75 ಲಕ್ಷ ಕಳವು

7

ಮಂಡ್ಯ: ರೂ 1.75 ಲಕ್ಷ ಕಳವು

Published:
Updated:

ಮಂಡ್ಯ: ಅಶೋಕನಗರ ಮೊದಲ ಕ್ರಾಸ್‌ನಲ್ಲಿರುವ ಸಹನಾ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯಲ್ಲಿ ಗುರುವಾರ ಹಾಡಹಗಲೇ 1.75 ಲಕ್ಷ ರೂಪಾಯಿ ನಗದು ಕಳವು ಮಾಡಿದ ಘಟನೆ ನಡೆದಿದೆ.ಬ್ಯಾಂಕಿಗೆ ಹಣ ಕಟ್ಟಲು ಅಂಗಡಿ ಮಾಲೀಕ ಪಿ. ಚಂದ್ರಶೇಖರ್ ಅವರು, ಹಣ ಎಣಿಸುತ್ತಿರುವಾಗ ಆಗಮಿಸಿದ ಗ್ರಾಹಕರೊಬ್ಬರು ಟಿವಿ ತೋರಿಸುವಂತೆ ಕೇಳಿದರು. ಹಣವನ್ನು ಅಲ್ಲಿಯೇ ಇರುವ ಗಲ್ಲಾಪೆಟ್ಟಿಗೆಯಲ್ಲಿ ಹಾಕಿ ಬೀಗ ಹಾಕದೇ ಟಿವಿ ನೋಡಲು ಹೋದರು. ಐದು ನಿಮಿಷದಲ್ಲಿ ಟಿವಿ ತೋರಿಸಿ ಮರಳಿ ಬಂದು ನೋಡಿದಾಗ ಗಲ್ಲಾ ಪೆಟ್ಟಿಗೆಯಲ್ಲಿದ್ದ 1.75 ಲಕ್ಷ ರೂಪಾಯಿ ಕಾಣೆಯಾಗಿತ್ತು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry