ಗುರುವಾರ , ನವೆಂಬರ್ 21, 2019
21 °C

ಮಂಡ್ಯ ಶಾಸಕ ಇಬ್ಬರು ಹೆಂಡಿರ ಗಂಡ!

Published:
Updated:

ಮಂಡ್ಯ: ಮಂಡ್ಯದ ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರ ಒಟ್ಟು ಆಸ್ತಿ ಒಂದು ಕೋಟಿ ದಾಟಿದ್ದರೆ, ಅವರ ಪತ್ನಿಯರಾದ ಶಾಂತಾ ಅವರು 32 ಲಕ್ಷ ಹಾಗೂ ಎಸ್. ಪದ್ಮಾವತಿ ಅವರು 1.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.ಶ್ರೀನಿವಾಸ್ ಅವರು  91 ಲಕ್ಷ ರೂಪಾಯಿ ಸ್ಥಿರಾಸ್ತಿ, 3.80 ಲಕ್ಷ ರೂಪಾಯಿ ಚರಾಸ್ತಿ, 2.8 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ, 15 ರೂ ಬೆಲೆ ಬಾಳುವ ವಾಹನಗಳನ್ನು ಹೊಂದಿದ್ದಾರೆ.ಪತ್ನಿ ಶಾಂತಾ ಅವರು 20 ಲಕ್ಷ ರೂಪಾಯಿ ಸ್ಥಿರಾಸ್ತಿ, 6.50 ಲಕ್ಷ ರೂಪಾಯಿ ಚರಾಸ್ತಿ, 6.10 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಹೊಂದಿದ್ದಾರೆ. ಇನ್ನೊಬ್ಬ ಪತ್ನಿ ಎಸ್. ಪದ್ಮಾವತಿ ಅವರು 1.57 ಕೋಟಿ ರೂಪಾಯಿ ಸ್ಥಿರಾಸ್ತಿ, 8.9 ಲಕ್ಷ ರೂಪಾಯಿ ಚರಾಸ್ತಿ, 8.9 ಲಕ್ಷ ರೂಪಾಯಿ ಚಿನ್ನಾಭರಣ ಮತ್ತಿತರ ವಸ್ತು ಹೊಂದಿದ್ದಾರೆ.ಮೈಸೂರು ವರದಿ:  ಹೆಗ್ಗಡದೇವನ ಕೋಟೆ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಎಸ್.ಚಿಕ್ಕಮಾದ ಅವರಿಗೂ ಇಬ್ಬರು ಪತ್ನಿಯರು.ಪತ್ನಿ ಜಯಮ್ಮ ಅವರ ಹೆಸರಿನಲ್ಲಿ ರೂ 3.43 ಲಕ್ಷ ಹಾಗೂ ನಾಗಮ್ಮ ಹೆಸರಿನಲ್ಲಿ ರೂ 2.15 ಲಕ್ಷ ಹೂಡಿಕೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)