ಮಂಗಳವಾರ, ಅಕ್ಟೋಬರ್ 22, 2019
26 °C

ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ

Published:
Updated:

ಮಾನ್ವಿ: ಧನುರ್ಮಾಸದ ನಿಮಿತ್ಯ ಪಟ್ಟಣದ ಐತಿಹಾಸಿಕ ಶ್ರೀಜಗನ್ನಾಥದಾಸರ ಮಂದಿರದಿಂದ ಮಂತ್ರಾಲಯಕ್ಕೆ ಹಮ್ಮಿಕೊಳ್ಳಲಾಗಿರುವ `ಶ್ರೀದಾಸರಾಯರಿಂದ ಶ್ರೀ ಗುರುರಾಯರೆಡೆಗೆ~ ಮೂರನೇ ಹಂತದ ಭಕ್ತರ ಪಾದಯಾತ್ರೆಗೆ ಈಚೆಗೆ ಹುಣಸಿಹೊಳೆಯ ಕಣ್ವಮಠದ ವಿದ್ಯಾ ಭಾಸ್ಕರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ, ಪಾದಯಾತ್ರೆ ಸಂದರ್ಭದಲ್ಲಿ  ನಮ್ಮ ಪಾದಗಳು ಪ್ರತಿ ಹೆಜ್ಜೆ ಇಟ್ಟಾಗಲೆಲ್ಲಾ ನಮ್ಮ ಆತ್ಮಕ್ಕೆ ಸಂಸ್ಕಾರ ಬೆಳೆದು ಭಗವಂತನಲ್ಲಿ ಆಸಕ್ತಿ ಹಾಗೂ ಭಕ್ತಿ ಬೆಳೆಯಲು ಮಾರ್ಗವಾಗುತ್ತದೆ. ದೈವಸನ್ನಿಧಿ ತಲುಪಬೇಕಾದರೆ ಗುರುಗಳ ಆಶ್ರಯ ಬೇಕು. ಮಂತ್ರಾಲಯದ ಗುರುಗಳ ಆಶ್ರಯದಿಂದ ದೇವರ ಸ್ಮರಣೆ ಮಾಡುವ  ನಿಟ್ಟಿನಲ್ಲಿ ಪಾದಯಾತ್ರೆ ಉತ್ತಮ ಕಾರ್ಯವಾಗಿದೆ ಎಂದರು.ಮಂತ್ರಾಲಯದ ಮಠದ ವತಿಯಿಂದ ಶ್ರೀ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ನಂತರ ಸ್ವಾಮೀಜಿ ಅವರನ್ನು ಶ್ರೀಜಗನ್ನಾಥದಾಸರ ಮಂದಿರದಿಂದ ಪಟ್ಟಣದ ಕೋರ್ಟ್ ಹತ್ತಿರ ಇರುವ ಶ್ರೀ ಆಂಜನೇಯ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ವಿದ್ಯಾಭಾಸ್ಕರ ತೀರ್ಥರು ಜಗನ್ನಾಥದಾಸರ ತಂಬೂರಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಪಟ್ಟಣದ ಪವನ ಭಜನಾ ಮಂಡಳಿ ಹಾಗೂ ದಾಸಾರ್ಯ ಭಜನಾ ಮಂಡಳಿಯ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ವಿಶೇಷ ಭಜನೆ ಮಾಡಿದರು. ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್, ಧರ್ಮಾಧಿಕಾರಿಗಳಾದ ರಾಜಾ ಎಸ್.ಬ್ರಹ್ಮಣ್ಯಾಚಾರ್ ಹಾಗೂ ವತ್ಸಾಲಾಚಾರ್, ಜಗನ್ನಾಥದಾಸ ಮಂದಿರದ ವ್ಯವಸ್ಥಾಪಕ ಪಂಡಿತ ದ್ವಾರಕಾನಾಥಾಚಾರ್, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯಕುಮಾರ ಇಬ್ರಾಂಪುರ, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿ, ಜಿಲ್ಲಾಧ್ಯಕ್ಷ ಮನ್ಸಾಲಿ ವೆಂಕಯ್ಯಶೆಟ್ಟಿ, ಬ್ರಾಹ್ಮಣ ಸಮಾಜದ ಮುಖಂಡರಾದ ಪಾಂಡುರಂಗರಾವ್ ಗೋರ್ಕಲ್, ಕೃಷ್ಣಮೂರ್ತಿ ಜೋಷಿ ಕೋರ್ಟ್, ವೆಂಕಟೇಶ ದಾಸ್ಪೇಟ್, ವೆಂಕೋಬರಾವ್ ಕಪಗಲ್, ರಾಮಕೃಷ್ಣ ಬಿಜ್ಜೂರು, ಕೃಷ್ಣಮೂರ್ತಿ ಗುಡಿ, ಪ್ರಹ್ಲಾದ್ ಕುರ್ಡಿಕರ್, ನರಸಿಂಹ ಅಪೂಟ್, ಕೆ.ಜಗನ್ನಾಥರಾವ್, ವಿಜಯಕುಮಾರ ಕುಲಕರ್ಣಿ, ಗುರುರಾಜ ಕೊಟ್ನೇಕಲ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)