ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ

7

ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ

Published:
Updated:

ಕಾರಟಗಿ:ಇಲ್ಲಿಯ ಹರೇ ಶ್ರೀನಿವಾಸ ಭಜನಾ ಮಂಡಳಿ ನೇತೃತ್ವದಲ್ಲಿ ಬೇವಿನಾಳ ಗ್ರಾಮದ 20 ಭಕ್ತರು ಪಾದಯಾತ್ರೆಯ ಮೂಲಕ ಮಂತ್ರಾಲ­ಯಕ್ಕೆ ಗುರುವಾರ ತೆರಳಿದರು.ರಾಘವೇಂದ್ರರಾವ್ ಕುಲ್ಕರ್ಣಿ ನಿವಾಸದಲ್ಲಿ ಹಾಗೂ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪಾದ­ಯಾತ್ರೆ ಆರಂಭಿಸಿದರು.ನೇತೃತ್ವ ವಹಿಸಿದ್ದ ರಾಮರಾವ್ ಕುಲ್ಕರ್ಣಿ, ವ್ಯಾಸರಾಜ್, ಸುದೀಂದ್ರ ಮಾತನಾಡಿ 12ನೇ ವರ್ಷದ ಪಾದಯಾತ್ರೆ ಇದಾಗಿದೆ. ರಾಯರ ಅನುಗ್ರಹ ಪಡೆಯಲು ಹಾಗೂ ಆರೋಗ್ಯಕ್ಕೆ ಸಹಕಾರಿಯಾ­ಗುವುದ­ರಿಂದ ಪಾದಯಾತ್ರೆ ಮಾಡುವೆವು. ಮೊದಲ ದಿನ ದಡೇಸ್ಗೂರ, ಎರಡನೇಯ ದಿನ ಉರಕುಂದಿ ಈರಣ್ಣ ಬಳಿ ವಾಸ್ತವ್ಯ ಮಾಡಿ, 3ನೇ ದಿನ ಮಂತ್ರಾಲಯ ತಲುಪುವೆವು ಎಂದರು.ಭೋಗೇಶರಾವ್ ಕುಲ್ಕರ್ಣಿ, ನಾರಾಯಣರಾವ್, ರಾಘವೇಂದ್ರ­ರಾವ್ ಕುಲ್ಕರ್ಣಿ, ಸತ್ಯನಾರಾಯಣ ಕುಲ್ಕರ್ಣಿ, ಬಿಲ್ಗಾರ ನಾಗರಾಜ್, ಮಹೇಶಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry