ಶನಿವಾರ, ಜೂನ್ 19, 2021
23 °C

ಮಂತ್ರಿಗಿರಿಗೆ ಬಿಜೆಪಿ ಶಾಸಕರ ಲಾಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟ, ರೆಸಾರ್ಟ್ ರಾಜಕಾರಣ, ಮಂತ್ರಿಗಿರಿಗಾಗಿ ಲಾಬಿ ಮಾಡುವುದರಲ್ಲಿ ಮುಳುಗಿರುವ ಶಾಸಕರು ತಮ್ಮ ಕ್ಷೇತ್ರಗಳನ್ನು ಮರೆತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ದೂರಿದರು.ಮೆಣಸೆಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತ ಯಾಚಿಸಿ ಅವರು ಮಾತನಾಡಿದರು. ರೆಡ್ಡಿಗಳ ಹಣವನ್ನು ಬಿಜೆಪಿ ಶಾಸಕರ ಖರೀದಿಗೆ ಬಳಸಿಕೊಳ್ಳುವ ಮೂಲಕ ರಾಜ್ಯದ ಹಲವು ಉಪ ಚುನಾವಣೆಗೆ ಹೊಣೆಯಾಗಿದೆ. ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸುವ ವಿಧಾನಸಭೆಯಲ್ಲಿ ರಾಜ್ಯದ ಮಂತ್ರಿಗಳು ಏನು ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ನಂತರವೂ ಕ್ಷೇತ್ರದ ಜನತೆ ಸಂಪರ್ಕ ದಲ್ಲಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರುವ ತನಗೆ ನಿಮ್ಮ ಸೇವೆಯನ್ನು ಮಾಡುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಬೇಗಾನೆ ರಾಮಯ್ಯ, ಪಕ್ಷದ ಮುಖಂ ರಾದ ಬಾಳೆಮನೆ ನಟರಾಜ್, ಕಾನುವಳ್ಳಿ ಕೃಷ್ಣಪ್ಪಗೌಡ, ಪೂರ್ಣಿಮಾ ಇದ್ದರು.ವಾರದ ಸಂತೆ ರದ್ದು

ಬಾಳೆಹೊನ್ನೂರು: ಇದೇ 18ರಂದು ನಡೆಯಲಿರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ  ಪಟ್ಟಣದ  ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚುವರಿ ಮತಗಟ್ಟೆ ಸ್ಥಾಪನೆ

ಬಾಳೆಹೊನ್ನೂರು: ಇದೇ 18ರಂದು ನಡೆ ಯಲಿರುವ ಲೋಕಸಭಾ ಉಪ ಚುನಾ ವಣೆಗೆ ನೂತನ ಮತಗಟ್ಟೆಯನ್ನು ಕಡ್ಲೆಮಕ್ಕಿ ಸಮೀಪದ ಮಸೀದಿಕೆರೆಯಲ್ಲಿನ ಅಂಗನ ವಾಡಿ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಕಡ್ಲೆಮಕ್ಕಿ ಮತಗಟ್ಟೆ ಸಂಖ್ಯೆ 205ರಲ್ಲಿ 989 ಮತದಾರರನ್ನು ಉಳಿಸಿಕೊಳ್ಳ ಲಾಗಿದೆ. ಹೆಚ್ಚುವರಿಯಾಗಿ ಸ್ಥಾಪಿಸಲಾಗಿರುವ ನೂತನ ಮತಗಟ್ಟೆ ಸಂಖ್ಯೆ 205(ಎ)ಯಲ್ಲಿ  413 ಮತ ದಾರರು ಒಳಪಡಲಿದ್ದಾರೆ. ಈ ಮತದಾನ ಕೇಂದ್ರದಲ್ಲಿ ಮತಚಲಾಯಿಸುವಂತೆ  ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.